ADVERTISEMENT

ಚಿಟಗುಪ್ಪ| ಹಿಂದೂ ಪರಂಪರೆ, ಸಂಸ್ಕೃತಿ ಉಳಿಸಿ: ರಾಜೇಶ್ವರ ಶಿವಾಚಾರ್ಯರು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 6:12 IST
Last Updated 11 ಫೆಬ್ರುವರಿ 2026, 6:12 IST
ಚಿಟಗುಪ್ಪ ಪಟ್ಟಣದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ರಾಜೇಶ್ವರ ಶಿವಾಚಾರ್ಯ ಮಾತನಾಡಿದರು
ಚಿಟಗುಪ್ಪ ಪಟ್ಟಣದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ರಾಜೇಶ್ವರ ಶಿವಾಚಾರ್ಯ ಮಾತನಾಡಿದರು   

ಚಿಟಗುಪ್ಪ (ಹುಮನಾಬಾದ್): ‘ಹಿಂದೂ ಸಮಾಜವು ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಸಮಾಜವಾಗಿದೆ’ ಎಂದು ತಡೋಳಾದ ರಾಜೇಶ್ವರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಭವಾನಿ ಮಂದಿರ ಆವರಣದಲ್ಲಿ ಆಯೋಜಿಸಿದ್ದ ವಿರಾಟ್ ಹಿಂದೂ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಪ್ರತಿಯೊಂದು ಸಮುದಾಯಕ್ಕೂ ಗೌರವಯುತ ಸ್ಥಾನವಿದೆ. ನಮ್ಮ ಪರಂಪರೆ ಮತ್ತು ಸಂಸ್ಕೃತಿ ಉಳಿಸುವುದು ಅಗತ್ಯವಾಗಿದೆ. ಎಲ್ಲರೂ ಒಂದಾಗಿ ಸನಾತನ ಸಂಸ್ಕೃತಿಯ ಸಂರಕ್ಷಣೆಗೆ ಕೈಜೋಡಿಸಬೇಕು’ ಎಂದು ಹೇಳಿದರು.

ಗುರುಲಿಂಗ ಶಿವಾಚಾರ್ಯ, ಸೊಂತದ ಶಂಕರಲಿಂಗ ಮಹಾರಾಜ, ಹವಾಮಲ್ಲಿನಾಥ ಮಹಾರಾಜ, ಮರುಳಾರಾಧ್ಯ ಶಿವಾಚಾರ್ಯ, ರಾಜಶೇಖರ, ಬಸವರಾಜ ಪಾಟೀಲ, ವಿಜಯಕುಮಾರ ಬೊಮ್ಮಣಿ, ಮಲ್ಲಿಕಾರ್ಜುನ ಪಾಟೀಲ, ಸೂರ್ಯಕಾಂತ ಮಠಪತಿ, ಅಮರರೆಡ್ಡಿ, ಅಮಿತ ತೊಗಲೂರ, ರಮೇಶ ಪಾರಾ, ಅನಿಲ್ ಜೋಶಿ, ಪಪ್ಪು ಪಾಟೀಲ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.