ADVERTISEMENT

‘ಗುಣಮಟ್ಟದ ಕಾಮಗಾರಿಗೆ ಆದ್ಯತೆ’

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 16:09 IST
Last Updated 29 ಜುಲೈ 2024, 16:09 IST
ಚಿಟಗುಪ್ಪ ಪಟ್ಟಣದಲ್ಲಿ ಸೋಮವಾರ ಶಾಸಕ ಡಾ.ಸಿದ್ಧಲಿಂಗಪ್ಪ ಪಾಟೀಲ ರಸ್ತೆ ಸುಧಾರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು
ಚಿಟಗುಪ್ಪ ಪಟ್ಟಣದಲ್ಲಿ ಸೋಮವಾರ ಶಾಸಕ ಡಾ.ಸಿದ್ಧಲಿಂಗಪ್ಪ ಪಾಟೀಲ ರಸ್ತೆ ಸುಧಾರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು   

ಚಿಟಗುಪ್ಪ: ‘ಹತ್ತಾರು ವರ್ಷ ಬಾಳಿಕೆ ಬರುವಂತೆ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಬೇಕು’ ಎಂದು ಶಾಸಕ ಡಾ.ಸಿದ್ಧಲಿಂಗಪ್ಪ ಪಾಟೀಲ ಹೇಳಿದರು.

ಪಟ್ಟಣದಲ್ಲಿ 2023-24ನೇ ಸಾಲಿನ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 65 ಮಾರ್ಗವಾಗಿ ಶಾಮತಾಬಾದ್‌ ಗ್ರಾಮದಿಂದ ಪಟ್ಟಣ ಸಂಪರ್ಕಿಸುವ ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಕಾಮಗಾರಿ ನಡೆಯುವಾಗ ಜನರು ಗಮನ ಹರಿಸಬೇಕು. ಕಳಪೆ ಕಂಡುಬಂದರೆ ತಡೆದು ಉತ್ತಮ ರೀತಿಯಲ್ಲಿ ನಡೆಸುವಂತೆ ಸೂಚಿಸಬೇಕು’ ಎಂದು ಹೇಳಿದರು.

ADVERTISEMENT

ಮುಖಂಡರಾದ ವಿಶ್ವನಾಥ ಪಾಟೀಲ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ಭದ್ರೆಶ್ ಪಾಟೀಲ, ನಗರದ ಅಧ್ಯಕ್ಷ ಪ್ರವೀಣ ರಾಜಾಪೂರ, ಪರಮೇಶ ಬಬಡಿ, ಸಚಿನ ಮಠಪತಿ, ಪ್ರಶಾಂತ ಜವಳಿ, ರಾಜಗೋಪಾಲ ಐನಾಪುರ, ಶಾಮರಾವ ಭೂತಾಳೆ, ಅಮಿತ ತೊಗಲೂರ, ಬಸಪ್ಪ ಪಡಗಿ, ಸಂಜು ಪತನಕರ್, ಪವಾರ, ಶುಭಂ, ಕಿರಣ, ನರಸಪ್ಪ, ರಾಜು, ಅಮರ, ಶ್ರೀಕಾಂತ, ತುಕಾರಾಮ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.