ADVERTISEMENT

ಗ್ಲೋಬಲ್ ಸೈನಿಕ್ ಅಕಾಡೆಮಿಯಲ್ಲಿ ಕ್ರಿಸ್‌ಮಸ್ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 13:37 IST
Last Updated 26 ಡಿಸೆಂಬರ್ 2019, 13:37 IST
ಬೀದರ್‌ನ ಗ್ಲೋಬಲ್ ಸೈನಿಕ್ ಅಕಾಡೆಮಿಯಲ್ಲಿ ಆಯೋಜಿಸಿದ್ದ ಕ್ರಿಸ್‌ಮಸ್‌ ಆಚರಣೆ ಕಾರ್ಯಕ್ರಮಕ್ಕೆ ಕ್ಯಾಥರೀನ್ ಸಿಕೆನಪುರೆ ಕೇಕ್‌ ಕತ್ತರಿಸುವ ಮೂಲಕ ಚಾಲನೆ ನೀಡಿದರು
ಬೀದರ್‌ನ ಗ್ಲೋಬಲ್ ಸೈನಿಕ್ ಅಕಾಡೆಮಿಯಲ್ಲಿ ಆಯೋಜಿಸಿದ್ದ ಕ್ರಿಸ್‌ಮಸ್‌ ಆಚರಣೆ ಕಾರ್ಯಕ್ರಮಕ್ಕೆ ಕ್ಯಾಥರೀನ್ ಸಿಕೆನಪುರೆ ಕೇಕ್‌ ಕತ್ತರಿಸುವ ಮೂಲಕ ಚಾಲನೆ ನೀಡಿದರು   

ಬೀದರ್‌: ಗ್ಲೋಬಲ್ ಸೈನಿಕ್ ಅಕಾಡೆಮಿಯಲ್ಲಿ ಕ್ರಿಸ್‍ಮಸ್ ಆಚರಿಸಲಾಯಿತು. ಕ್ಯಾಥರೀನ್ ಸಿಕೆನಪುರೆ ಕೇಕ್‌ ಕತ್ತರಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

‘ಕ್ರಿಸ್‍ಮಸ್ ಯೇಸು ಕ್ರಿಸ್ತನ ಪ್ರೀತಿ ಹಾಗೂ ಶಾಂತಿ ಸಂದೇಶವನ್ನು ಸಾರುವ ಹಬ್ಬ’ ಎಂದು ಶಾಲೆಯ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆನಪುರೆ ಹೇಳಿದರು.

ಮಕ್ಕಳು ನೃತ್ಯ, ಸಂಗೀತ, ಗಾಯನ, ಭಾಷಣ, ಕಿರುನಾಟಕ ಪ್ರದರ್ಶಿಸಿದರು. ಅವಿನಾಶ್ ಸಿಕೆನಪುರೆ, ವಿಮಲಾ ಸಿಕೆನಪುರೆ, ಮುಖ್ಯ ಶಿಕ್ಷಕರಾದ ಪೃಥ್ವಿರಾಜ್, ಜೋ.ನೆಲ್ಸನ್, ಪಿ.ಆರ್.ಒ ಕಾರಂಜಿ ಸ್ವಾಮಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.