ADVERTISEMENT

ಔರಾದ್ | ಮಣ್ಣಿನ ಹಣತೆ ಪ್ರದರ್ಶನ, ಮಾರಾಟ

ಸ್ವಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಮಣ್ಣಿನ ಹಣತೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 4:41 IST
Last Updated 21 ಅಕ್ಟೋಬರ್ 2025, 4:41 IST
ಔರಾದ್ ತಾಲ್ಲೂಕು ಪಂಚಾಯಿತಿ ಪ್ರಾಂಗಣದಲ್ಲಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಗೃಹೋಪಯೋಗಿ ವಸ್ತುಗಳ ಮೇಳವನ್ನು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಇತರರು ವೀಕ್ಷಿಸಿದರು
ಔರಾದ್ ತಾಲ್ಲೂಕು ಪಂಚಾಯಿತಿ ಪ್ರಾಂಗಣದಲ್ಲಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಗೃಹೋಪಯೋಗಿ ವಸ್ತುಗಳ ಮೇಳವನ್ನು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಇತರರು ವೀಕ್ಷಿಸಿದರು   

ಔರಾದ್: ಇಲ್ಲಿಯ ತಾಲ್ಲೂಕು ಪಂಚಾಯಿತಿ ಪ್ರಾಂಗಣದಲ್ಲಿ ಸ್ವಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಮಣ್ಣಿನ ಹಣತೆ ಹಾಗೂ ಗೃಹೋಪಯೋಗಿ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು.

ಎರಡು ದಿನ ನಡೆದ ಈ ಮಾರಾಟ ಮೇಳದಲ್ಲಿ ಹೆಡಗಾಪೂರ, ಚಟ್ನಾಳ, ವಡಗಾಂವ್ ಗ್ರಾಮದ ಮಹಿಳೆಯರು ತಯಾರಿಸಿದ ಮಣ್ಣಿನ ಹಣತೆ, ಮಡಿಕೆ, ಮುತ್ತಿನ ಸರಗಳು ಜನ ಕುತೂಹಲದಿಂದ ವೀಕ್ಷಿಸಿ ಖರೀದಿಸಿದರು.

ಧುಪತಮಹಾಗಾವ್ ಗ್ರಾಮದ ಮಹಿಳೆ ತಯಾರಿಸಿದ ಬೆಲ್ಲದ ಚಿಕ್ಕಿ ರುಚಿ ಗ್ರಾಹಕರನ್ನು ಸೆಳೆಯಿತು. ಒಂದೇ ದಿನ ₹ 8 ಸಾವಿರ ಬೆಲ್ಲದ ಚಿಕ್ಕಿ ಮಾರಾಟವಾಯಿತು. ದೇಶಿ ಬೆಲ್ಲ, ಸಕ್ಕರೆಯಿಂದ ತಯಾರಿಸಿದ ವಿವಿಧ ಸಿಹಿ ತಿಂಡಿಗಳು ಜನ ಖರೀದಿಸಿದರು.

ADVERTISEMENT

ಉದ್ಘಾಟನೆ: ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿ,‘ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ (ಎನ್‌ಆರ್‌ಎಲ್‌ಎಂ) ಸಂಜೀವಿನಿ ಯೋಜನೆಯಡಿ ಸ್ಥಾಪನೆಯಾದ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಹಣತೆ ಹಾಗೂ ಇತರೆ ಗೃಹೋಪಯೋಗಿ ವಸ್ತುಗಳು ತುಂಬಾ ಆಕರ್ಷಕವಾಗಿವೆ. ಜನ ಇಂತಹ ವಸ್ತುಗಳು ಖರೀದಿಸುವ ಮೂಲಕ ಸ್ವಸಹಾಯ ಸಂಘದ ವ್ಯಾಪಾರಕ್ಕೆ ಪ್ರೋತ್ಸಾಹಿಸಬೇಕು’ ಎಂದರು.

ಎನ್‌ಆರ್‌ಎಲ್‌ಎ ಯೋಜನೆಯಡಿ 10 ಸ್ವಸಹಾಯ ಗುಂಪಿನ 50ಕ್ಕೂ ಹೆಚ್ಚು ಮಹಿಳೆಯರು ಈ ಮಾರಾಟ ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಅವರೆಲ್ಲರಿಗೂ ಯೋಜನೆಯಡಿ ಆರ್ಥಿಕ ನೆರವು ನೀಡಿ ಸ್ವ ಉದ್ಯೋಗಕ್ಕೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ಎನ್‌ಆರ್‌ಎಲ್‌ಎಂ ತಾಲ್ಲೂಕು ವಲಯ ಮೇಲ್ವಿಚಾರಕ ಶರಣಬಸಪ್ಪ ಸಾವಳೆ ಹೇಳಿದರು.

ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಸಂಜುಕುಮಾರ ಗೋರನಾಳೆ, ಕಾರ್ಯಕ್ರಮ ವ್ಯವಸ್ಥಾಪಕ ರಾಜಕುಮಾರ ಗೊರಟೆ, ತಾಲ್ಲೂಕು ಸಂಯೋಜಕ ಸುಭಾಷ ಮಾನಕರೆ, ಶಿವಾನಂದ ಮಡ್ಡೆ, ಶಿಲ್ಪಾ, ಹಣಮಂತ ಮೇತ್ರೆ, ಮಾರುತಿ ಹೊಸಮನಿ ಇದ್ದರು.

ಔರಾದ್ ತಾಲ್ಲೂಕು ಪಂಚಾಯಿತಿ ಪ್ರಾಂಗಣದಲ್ಲಿ ನಡೆದ ಮಾರಾಟ ಮೇಳದಲ್ಲಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.