ADVERTISEMENT

ಬೀದರ್ ಜಿಲ್ಲೆಯಲ್ಲಿ ₹ 1 ಕೋಟಿ ದೇಣಿಗೆ ಸಂಗ್ರಹ: ರಾಜೇಂದ್ರಕುಮಾರ ಗಂದಗೆ

‘ಪುಣ್ಯಕೋಟಿ’ ಯೋಜನೆಗೆ ಕೈಜೋಡಿಸಿದ ನೌಕರರು

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 11:28 IST
Last Updated 31 ಜನವರಿ 2023, 11:28 IST
ರಾಜೇಂದ್ರಕುಮಾರ ಗಂದಗೆ
ರಾಜೇಂದ್ರಕುಮಾರ ಗಂದಗೆ   

ಬೀದರ್: ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರು ತಮ್ಮ ವೇತನದಲ್ಲಿ ದೇಣಿಗೆ ಹಣ ಕಡಿತಗೊಳಿಸುವ ಮೂಲಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪುಣ್ಯಕೋಟಿ ದತ್ತು ಯೋಜನೆಗೆ ಕೈಜೋಡಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ವೇತನದ ₹ 70 ಲಕ್ಷ ಹಾಗೂ ಅನುದಾನಿತ ಶಾಲಾ, ಕಾಲೇಜುಗಳ ನೌಕರರ ದೇಣಿಗೆ ಹಣ ಸೇರಿದಂತೆ ಜಿಲ್ಲೆಯಲ್ಲಿ ಯೋಜನೆಗೆ ಸುಮಾರು ₹ 1 ಕೋಟಿ ದೇಣಿಗೆ ಸಂಗ್ರಹವಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದ್ದಾರೆ.

ಯೋಜನೆಗೆ ನವೆಂಬರ್‍ನಲ್ಲಿ ₹ 26,44,800 ಹಾಗೂ ಡಿಸೆಂಬರ್‌ನಲ್ಲಿ ₹ 43,61,400 ಸೇರಿದಂತೆ ಒಟ್ಟು ₹ 70,06,200 ಸಂಗ್ರಹವಾಗಿದೆ. ಈ ಪೈಕಿ ಔರಾದ್ ತಾಲ್ಲೂಕಿನಿಂದ 8,62,700, ಬಸವಕಲ್ಯಾಣದಿಂದ ₹ 12,03,900, ಭಾಲ್ಕಿಯಿಂದ 10,06,800, ಬೀದರ್‍ನಿಂದ ₹ 26,68,200, ಚಿಟಗುಪ್ಪದಿಂದ ₹ 2,44,800, ಹುಮನಾಬಾದ್‍ನಿಂದ ₹ 7,73,200, ಕಮಲನಗರದಿಂದ ₹ 1,82,400 ಹಾಗೂ ಹುಲಸೂರು ತಾಲ್ಲೂಕಿನಿಂದ ₹ 64,200 ಸಂಗ್ರಹವಾಗಿದೆ ಎಂದು ಹೇಳಿದ್ದಾರೆ.

ಎ ದರ್ಜೆ ನೌಕರರು ಯೋಜನೆಗೆ ₹ 11 ಸಾವಿರ, ಬಿ ದರ್ಜೆ ನೌಕರರು ₹ 4 ಸಾವಿರ ಹಾಗೂ ಸಿ ದರ್ಜೆ ನೌಕರರು ₹ 400 ದೇಣಿಗೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ನೌಕರರ ಬಹುತೇಕ ಬೇಡಿಕೆಗಳನ್ನು ಈಡೇರಿಸಿದೆ. ಹೀಗಾಗಿ ಸರ್ಕಾರದ ಯೋಜನೆಗೆ ಕೈಜೋಡಿಸುವುದು ನೌಕರರ ಕರ್ತವ್ಯವಾಗಿದೆ. ದೇಣಿಗೆ ನೀಡುವ ಮೂಲಕ ಸರ್ಕಾರದ ಆಶಯ ಸಾಕಾರಕ್ಕೆ ಸಹಕರಿಸಿದ ಜಿಲ್ಲೆಯ ನೌಕರರಿಗೆ ಕೃತಜ್ಞತೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.