ADVERTISEMENT

ಭಾರತೀಯರೊಂದಿಗೆ ಅಮಾನುಷ ವರ್ತನೆ: ಅಮೆರಿಕ ಧೋರಣೆ ಖಂಡಿಸಿದ ಸಾಗರ್‌ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 13:09 IST
Last Updated 6 ಫೆಬ್ರುವರಿ 2025, 13:09 IST
<div class="paragraphs"><p>ಸಂಸದ ಸಾಗರ್‌ ಖಂಡ್ರೆ </p></div>

ಸಂಸದ ಸಾಗರ್‌ ಖಂಡ್ರೆ

   

ಬೀದರ್‌: ‘ಅಮೆರಿಕದಿಂದ ಭಾರತೀಯರನ್ನು ವಾಪಸ್‌ ಕಳಿಸುವ ಸಂದರ್ಭದಲ್ಲಿ ಅವರ ಕೈಗಳಿಗೆ ಅಪರಾಧಿಗಳಂತೆ ಬೇಡಿ ಹಾಕಿ ಅಮಾನುಷವಾಗಿ ನಡೆದುಕೊಂಡಿರುವ ಅಮೆರಿಕದ ಧೋರಣೆ ಖಂಡನಾರ್ಹ’ ಎಂದು ಸಂಸದ ಸಾಗರ್‌ ಖಂಡ್ರೆ ತಿಳಿಸಿದ್ದಾರೆ.

ಇದು ಮಾನವೀಯ ಮೌಲ್ಯಗಳಿಗೆ ವಿರುದ್ಧವಾದುದು. ಯಾವುದೇ ಕಾರಣಕ್ಕೂ ಇದು ಸ್ವೀಕಾರಾರ್ಹವಲ್ಲ. ಭಾರತ ಸರ್ಕಾರವು ಈ ಸಂಕಷ್ಟದ ಸಂದರ್ಭದಲ್ಲಿ ತನ್ನ ಪ್ರಜೆಗಳ ಪರ ನಿಂತು, ಅವರ ಗೌರವ ಮತ್ತು ಹಕ್ಕುಗಳನ್ನು ರಕ್ಷಿಸಬೇಕು. ಈ ಅಮಾನುಷ ವರ್ತನೆಗೆ ಸಮರ್ಥನೆ ನೀಡುವ ಬದಲು, ತಕ್ಷಣವೇ ರಾಜತಾಂತ್ರಿಕ ಮಟ್ಟದಲ್ಲಿ ಬಲವಾದ ಹಸ್ತಕ್ಷೇಪ ಮಾಡಿ, ಭಾರತೀಯರ ಗೌರವವನ್ನು ಉಳಿಸಲು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕೆಂದು ಗುರುವಾರ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.