ADVERTISEMENT

‘ಸಂವಿಧಾನ ಸರ್ವರ ಹಕ್ಕು’

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 12:22 IST
Last Updated 26 ನವೆಂಬರ್ 2022, 12:22 IST
ಚಿಟಗುಪ್ಪ ಪಟ್ಟಣದ ಪುರಸಭೆ ಕಚೇರಿಯಲ್ಲಿ ಸಂವಿಧಾನ ದಿನ ಆಚರಿಸಲಾಯಿತು
ಚಿಟಗುಪ್ಪ ಪಟ್ಟಣದ ಪುರಸಭೆ ಕಚೇರಿಯಲ್ಲಿ ಸಂವಿಧಾನ ದಿನ ಆಚರಿಸಲಾಯಿತು   

ಚಿಟಗುಪ್ಪ: ‘ಸಂವಿಧಾನ ದೇಶದ ಪ್ರತಿ ಪ್ರಜೆಯ ಹಕ್ಕು. ನೆಮ್ಮದಿಯ ಜೀವನ ನಡೆಸಲು ಅದು ಸಹಕಾರಿ’ ಎಂದು ಪುರಸಭೆ ಅಧ್ಯಕ್ಷೆ ಮಾಲಾಶ್ರೀ ಶಾಮರಾವ್‌ ಹೇಳಿದರು.

ಇಲ್ಲಿಯ ಪುರಸಭೆ ಕಚೇರಿಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾನತೆ, ಸೌಹಾರ್ದ, ಸಹಕಾರ ಮನೋಭಾವದಿಂದ ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿ ಬದುಕಿದಾಗ ಮಾತ್ರ ಸಂವಿಧಾನದ ಮೂಲ ಆಶಯ ಈಡೇರುತ್ತದೆ ಎಂದರು.

ADVERTISEMENT

ಪುರಸಭೆ ಸದಸ್ಯರು, ಪುರಸಭೆ ಪರಿಸರ ಎಂಜಿನಿಯರ್ ಪೂಜಾ, ಸಿಬ್ಬಂದಿ ರವಿ ಸ್ವಾಮಿ, ನೆಥಾನಿಯಲ್‌, ವೈಶಾಲಿ, ರವಿಭಯ್ಯ, ರವಿ ಶಾಖಾ, ರಾಜ ತೆಲಂಗ್‌, ಸಚಿನ್‌, ಗಣ್ಯರಾದ ಶಾಮರಾವ್‌, ಮನೋಜಕುಮಾರ್‌ ಶರ್ಮಾ, ಭಗವಾನ ಡಾಂಗೆ ಹಾಗೂ ಮೊಹನಸಿಂಗ್‌ ಇದ್ದರು.

ಬಸವರಾಜ ಸ್ವಾಗತಿಸಿದರು. ಸಚಿನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.