ADVERTISEMENT

ಮನೆಗೆ ನುಗ್ಗಿದ ಕಂಟೇನರ್; ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 7:54 IST
Last Updated 14 ಏಪ್ರಿಲ್ 2024, 7:54 IST

ಹುಮನಾಬಾದ್ (ಬೀದರ್): ಚಾಲಕನ ನಿರ್ಲಕ್ಷ್ಯದಿಂದ ಕಂಟೇನರ್ ಲಾರಿಯೊಂದು ಮನೆಗೆ ನುಗ್ಗಿದ್ದರಿಂದ ಮಹಿಳೆಯೊಬ್ಬರು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಪಟ್ಟಣದ ಹೊರವಲಯದ ಹಳೆ ಆರ್.ಟಿ.ಒ. ಕಚೇರಿಯ ಹತ್ತಿರ ನಡೆದಿದೆ.

ಲಕ್ಷ್ಮೀಬಾಯಿ ಗಂಡ ಮಾರುತಿ (50) ಮೃತ ಮಹಿಳೆ. ಘಟನೆ ನಡೆದ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಶರಣಬಸಪ್ಪ ಹೊಸಮನಿ ಎಂಬುವವರು ಗಾಯಗೊಂಡಿದ್ದಾರೆ. ಬೇಸಿಗೆ ಇರುವುದರಿಂದ ಲಕ್ಷ್ಮೀಬಾಯಿ ಅವರು ಮನೆಯ ಮುಂದೆ ಮಲಗಿದ್ದರು.

ಲಾರಿ ನಿಲ್ಲಿಸಿದ್ದ ಚಾಲಕ ಅದರ ಹ್ಯಾಂಡ್ ಬ್ರೇಕ್ ಹಾಕದೆ ನಿಲ್ಲಿಸಿದ್ದ ಕಾರಣ ಲಾರಿಯು ನೇರವಾಗಿ ಮಲಗಿದ್ದ ನಮ್ಮ ತಾಯಿಯ ಮೇಲೆ ಹರಿಸು ಅಧಿಕ ರಕ್ತಸ್ರಾವ ಆಗಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಲಾರಿ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತ ಲಕ್ಷ್ಮೀಬಾಯಿ ಪುತ್ರ ಪಾಂಡುರಂಗ ಆಗ್ರಹಿಸಿದ್ದಾರೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.