ADVERTISEMENT

ಬಸವಕಲ್ಯಾಣ: ಕಾರ್ಮಿಕರಿಗೆ ಬಸ್‌ ವ್ಯವಸ್ಥೆ

ಬಸವಕಲ್ಯಾಣ: ಮಹಾರಾಷ್ಟ್ರದಿಂದ ತಾಲ್ಲೂಕು ಪ್ರವೇಶಿಸಿದ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 9 ಮೇ 2020, 9:22 IST
Last Updated 9 ಮೇ 2020, 9:22 IST
ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಮರಳುತ್ತಿರುವವರಿಗೆ ಊರಿಗೆ ಹೋಗಲು ವ್ಯವಸ್ಥೆ ಕಲ್ಪಿಸುವುದಕ್ಕೆ ಉಪ ವಿಭಾಗಾಧಿಕಾರಿ ಭಂವರಸಿಂಗ್ ಮೀನಾ, ತಹಶೀಲ್ದಾರ್ ಸಾವಿತ್ರಿ ಸಲಗರ ಸ್ಥಳದಲ್ಲಿ ಠಿಕಾಣಿ ಹೂಡಿದ್ದರು
ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಮರಳುತ್ತಿರುವವರಿಗೆ ಊರಿಗೆ ಹೋಗಲು ವ್ಯವಸ್ಥೆ ಕಲ್ಪಿಸುವುದಕ್ಕೆ ಉಪ ವಿಭಾಗಾಧಿಕಾರಿ ಭಂವರಸಿಂಗ್ ಮೀನಾ, ತಹಶೀಲ್ದಾರ್ ಸಾವಿತ್ರಿ ಸಲಗರ ಸ್ಥಳದಲ್ಲಿ ಠಿಕಾಣಿ ಹೂಡಿದ್ದರು   

ಬಸವಕಲ್ಯಾಣ: ತಾಲ್ಲೂಕಿನ ಚಂಡಕಾಪುರ ಹತ್ತಿರದಲ್ಲಿ ಮಹಾರಾಷ್ಟ್ರದಿಂದ ಬರುವವರ ತಪಾಸಣೆಗೆ ಹಾಕಿರುವ ಚೆಕ್‌ಪೋಸ್ಟ್‌ ಟೆಂಟ್ ಗಾಳಿ, ಮಳೆಯ ಕಾರಣ ಶುಕ್ರವಾರ ಬಿದ್ದುಹೋಗಿದ್ದು ಎಲ್ಲವೂ ಅಸ್ತವ್ಯಸ್ತವಾಯಿತು.

ದೇಶದಾದ್ಯಂತ ಕೊರೊನಾ ಹರಡಿದ್ದರಿಂದ ಲಾಕ್‌ಡೌನ್‌ ಇರುವುದರಿಂದ ವಿವಿಧೆಡೆ ಕೆಲಸಕ್ಕೆ ಹೋದವರು ನಡೆದುಕೊಂಡು ಸ್ವಂತ ಊರುಗಳಿಗೆ ವಾಪಸ್ ಬರುತ್ತಿದ್ದು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಮೂಲಕವೂ ಎರಡು ದಿನಗಳಿಂದ ಅನೇಕರು ಹಾದು ಹೋಗುತ್ತಿದ್ದಾರೆ. ಆಂಧ್ರ, ತೆಲಂಗಾಣದವರಲ್ಲದೆ ರಾಜ್ಯದ ಬೀದರ್, ಕಲಬುರ್ಗಿ ಜಿಲ್ಲೆಯ ವಿವಿಧ ಗ್ರಾಮದವರು ಇಲ್ಲಿಂದ ಹೋದರು. ಇಲ್ಲಿಗೆ ಬಂದಿರುವ ಬೀದರ್ ಜಿಲ್ಲೆಯ ವಿವಿಧ ತಾಲ್ಲೂಕುಗಳ
ಜನರ ಆರೋಗ್ಯ ತಪಾಸಣೆ ಹಾಗೂ ಇತರೆ ದಾಖಲೆ ಪರಿಶೀಲಿಸಿ ಅವರವರ ಗ್ರಾಮಗಳಿಗೆ ತೆರಳುವುದಕ್ಕಾಗಿ ಆಡಳಿತದಿಂದ ಬಸ್ ವ್ಯವಸ್ಥೆ ಕೂಡ ಕಲ್ಪಿಸಲಾಗಿತ್ತು.

ಇಲ್ಲಿನ ಉಪ ವಿಭಾಗಾಧಿಕಾರಿ ಭಂವರಸಿಂಗ್ ಮೀನಾ ಹಾಗೂ ತಹಶೀಲ್ದಾರ್ ಸಾವಿತ್ರಿ ಸಲಗರ ಸ್ಥಳದಲ್ಲಿ ಠಿಕಾಣಿ ಹೂಡಿದ್ದರು. ಇತರೆ ಇಲಾಖೆಗಳ ಸಿಬ್ಬಂದಿಗಳು ಕೂಡ ಮಹಾರಾಷ್ಟ್ರದಿಂದ ಬಂದವರ ತಪಾಸಣೆ ಕೈಗೊಂಡು ಅವರಿಗೆ ಹೋಂ ಕ್ವಾರಂಟೈನ್ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಕಟ್ಟಡ ಹಾಗೂ ಶಾಲೆಗಳಲ್ಲಿ ವ್ಯವಸ್ಥೆಗೊಳಿಸಿರುವ ಕ್ಯಾರಂಟೈನ್ ಕೇಂದ್ರಗಳಲ್ಲಿ ಉಳಿದುಕೊಳ್ಳಲು ಸೂಚಿಸಿದ್ದಾರೆ. ತಪಾಸಣೆ ನಡೆಯುವ ವೇಳೆಯಲ್ಲಿಯೇ ಸಂಜೆ ಇಲ್ಲಿ ಗಾಳಿ ಸಹಿತ ಮಳೆ ಬಂದಿದ್ದು ಗಾಳಿಗೆ ಚೆಕ್‌ಪೋಸ್ಟ್‌ ಟೆಂಟ್ ನೆಲಸಮಗೊಂಡಿದೆ. ರಸ್ತೆ ಹಾಗೂ ತಗ್ಗುಗಳಲ್ಲಿ ನೀರು ನಿಲ್ಲುವಷ್ಟು ಮಳೆ ಬಂದಿದ್ದರಿಂದ ಕೆಲವರಿಗೆ ಅದರಿಂದ ರಕ್ಷಿಸಿಕೊಳ್ಳಲು ಜಾಗ ಕೂಡ ಸಿಗದಂತಾಗಿ ಮೈ ತೊಯ್ದಿದೆ.
‘ಜನರನ್ನು ಊರಿಗೆ ಕಳುಹಿಸಲು 5 ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು’ ಎಂದು ಇಲ್ಲಿನ ಬಸ್ ಘಟಕ ವ್ಯವಸ್ಥಾಪಕ ರವೀಂದ್ರನಾಥ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.