ADVERTISEMENT

ಬೀದರ್: ವಾರ್ ರೂಂ 24 ಗಂಟೆ ಕಾರ್ಯ ನಿರ್ವಹಣೆ

ಕೋವಿಡ್‌ ನಿಯಂತ್ರಣಕ್ಕೆ ಹೆಚ್ಚಿನ ಅಧಿಕಾರಿಗಳ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 4 ಮೇ 2021, 3:25 IST
Last Updated 4 ಮೇ 2021, 3:25 IST
ರಾಮಚಂದ್ರನ್
ರಾಮಚಂದ್ರನ್   

ಬೀದರ್: ಜಿಲ್ಲೆಯಲ್ಲಿ ಕೋವಿಡ್ ಹರಡುವಿಕೆ ತಡೆಗಾಗಿ ಜಿಲ್ಲಾ ಆಡಳಿತ ಜಿಲ್ಲಾ ವಾರ್ ರೂಂಗೆ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳನ್ನು ನಿಯೋಜಿಸಿದೆ. ಮೂರು ಅಧಿಕಾರಿಗಳ ತಂಡಗಳು ದಿನದ 24 ಗಂಟೆ ಕೋವಿಡ್ ವಾರ್ ರೂಂ ನಿರ್ವಹಣೆ ಮಾಡಲಿವೆ.

ಕೋವಿಡ್ ವಾರ್ ರೂಂ ಸಂಖ್ಯೆ 08482-224316, 224317, 224318 ಮತ್ತು 224319 ಆಗಿದ್ದು, ಸಾರ್ವಜನಿಕರಿಗೆ ಕೋವಿಡ್‍ಗೆ ಸಂಬಂಧಿಸಿದ ಮಾಹಿತಿ ಒದಗಿಸಲಿವೆ. ಕೋವಿಡ್ ಆಸ್ಪತ್ರೆ, ಕೋವಿಡ್ ಕೇಂದ್ರಗಳಲ್ಲಿ ಇರುವ ಹಾಸಿಗೆ, ಆಮ್ಲಜನಕ ಲಭ್ಯತೆ ಮಾಹಿತಿ ಇಲ್ಲಿ ದೊರಕಲಿದೆ.

ಸಿಸಿ ಕ್ಯಾಮೆರಾಗಳ ನಿರಂತರ ವೀಕ್ಷಣೆ: ಬ್ರಿಮ್ಸ್ ಆಸ್ಪತ್ರೆಯ ಎಲ್ಲ ವಾರ್ಡ್‍ಗಳಲ್ಲಿ 28 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಿಡಿಯೊ ವೀಕ್ಷಣೆಗಾಗಿಯೇ ಅಧಿಕಾರಿಗಳನ್ನು ನೇಮಿಸಲಾಗಿದೆ. ಕ್ಯಾಮೆರಾಗಳ ಮೂಲಕ ಏನಾದರೂ ನೂನ್ಯತೆ ಅಥವಾ ಇನ್ನೇನಾದರೂ ವಿಷಯಗಳು ಗಮನಕ್ಕೆ ಬಂದರೆ ತಕ್ಷಣ ವಾರ್ ರೂಂನಿಂದ ಸಂಬಂಧಪಟ್ಟವರಿಗೆ ಕ್ರಮಕ್ಕಾಗಿ ಮಾಹಿತಿ ರವಾನಿಸಲಾಗುತ್ತಿದೆ ಎಂದು ಜಿಲ್ಲಾ ಆಡಳಿತ ತಿಳಿಸಿದೆ.

ADVERTISEMENT

50 ಜನ ಅಧಿಕಾರಿಗಳ ನಿಯೋಜನೆ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಚಿಕಿತ್ಸೆಗಾಗಿ ಸರ್ಕಾರಿ, ಅರೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೆಮ್‍ಡಿವಿಸಿರ್ ಇಂಜಕ್ಷನ್, ಆಮ್ಲಜನಕ ಉಪಯೋಗಕ್ಕೆ ಸಂಬಂಧಿಸಿದಂತೆ ಪ್ರತಿ ದಿನ ಮಾಹಿತಿ ಸಲ್ಲಿಕೆ ಕಾರ್ಯಕ್ಕೆ ಒಟ್ಟು 50 ಜನ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಒಂದು ಆಸ್ಪತ್ರೆಗೆ ಇಬ್ಬರು ಅಧಿಕಾರಿಗಳು: ಜಿಲ್ಲೆಯ ಎಂಟು ತಾಲ್ಲೂಕುಗಳ ಸರ್ಕಾರಿ ಹಾಗೂ ಅರೆ ಸರ್ಕಾರಿ ಆಸ್ಪತ್ರೆಗಳಿಗೆ ತಲಾ ಇಬ್ಬರು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಯಾವ ಆಸ್ಪತ್ರೆಗಳು: ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೀದರ್‌ನ 100 ಹಾಸಿಗೆಗಳ ಆಸ್ಪತ್ರೆ, ಕಸ್ತೂರಿ ಆಸ್ಪತ್ರೆ, ಗುದಗೆ ಆಸ್ಪತ್ರೆ, ಉದಯ ಆಸ್ಪತ್ರೆ, ಶ್ರೀ ಆಸ್ಪತ್ರೆ, ಬಿ.ಬಿ.ಎಸ್. ಆಸ್ಪತ್ರೆ, ಪ್ರಯಾವಿ (ಜೀವನ ರಕ್ಷಾ) ಆಸ್ಪತ್ರೆ, ಗುರುನಾನಕ ಆಸ್ಪತ್ರೆ, ಆನಂದ ಕ್ರೀಟಿಕೇರ್ ಆಸ್ಪತ್ರೆ, ಯುನೈಟೆಡ್ ಆಸ್ಪತ್ರೆ, ಸುರಕ್ಷಾ ಆಸ್ಪತ್ರೆ, ಹುಮನಾಬಾದ್ ಸರ್ಕಾರಿ ಆಸ್ಪತ್ರೆ, ಮನ್ನಾಎಖ್ಖೆಳ್ಳಿ, ಹಳ್ಳಿಖೇಡ ಸಮುದಾಯ ಆಸ್ಪತ್ರೆ, ಚಿಟಗುಪ್ಪ ಸಮುದಾಯ ಆಸ್ಪತ್ರೆ, ಭಾಲ್ಕಿ ತಾಲ್ಲೂಕು ಸರ್ಕಾರಿ ಆಸ್ಪತ್ರೆ, ನಿಟ್ಟೂರ (ಬಿ) ಸಮುದಾಯ ಆಸ್ಪತ್ರೆ, ಔರಾದ್ ತಾಲ್ಲೂಕು ಸರ್ಕಾರಿ ಆಸ್ಪತ್ರೆ, ತಾಲ್ಲೂಕಿನ ಸಂತಪುರ ಸಮುದಾಯ ಆಸ್ಪತ್ರೆ, ಕಮಲನಗರ ಸಮುದಾಯ ಆಸ್ಪತ್ರೆ, ಬಸವಕಲ್ಯಾಣ ತಾಲ್ಲೂಕು ಸರ್ಕಾರಿ ಆಸ್ಪತ್ರೆ, ರಾಜೇಶ್ವರ ಸಮುದಾಯ ಆಸ್ಪತ್ರೆ, ಪಾಟೀಲ ಆಸ್ಪತ್ರೆ, ಹುಲಸೂರು ತಾಲ್ಲೂಕಿನ ಸಮುದಾಯ ಆಸ್ಪತ್ರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.