ADVERTISEMENT

24ರಂದು ಕ್ರಿಕೆಟ್‌ ತಂಡಕ್ಕೆ ಆಯ್ಕೆ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2023, 15:32 IST
Last Updated 22 ನವೆಂಬರ್ 2023, 15:32 IST

ಬೀದರ್‌: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್.ಸಿ.ಎ) ರಾಯಚೂರು ವಲಯದಿಂದ 14 ವಯೋಮಿತಿ ಒಳಗಿನ ಕ್ರಿಕೆಟ್ ತಂಡಕ್ಕೆ ಆಯ್ಕೆ ಪ್ರಕ್ರಿಯೆ ನ.24ರಂದು ಕಲಬುರಗಿಯ ಕೆಬಿಎನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಬೀದರ್ ಜಿಲ್ಲೆಯ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನ.24ರಂದು ಮಧ್ಯಾಹ್ನ 2 ರಿಂದ 3.45 ರ ವರೆಗೆ ನಡೆಯಲಿದೆ. 2009 ಸೆ.1ರ ನಂತರ ಜನಿಸಿದವರು ಆಧಾರ್ ಕಾಡ್೯, ಜನ್ಮ ಪ್ರಮಾಣಪತ್ರ, ಸ್ಕೂಲ್ ಐಡಿ ಕಾರ್ಡ್‌ನೊಂದಿಗೆ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಅನೀಲಕುಮಾರ ದೇಶಮುಖ (9341111136), ವಿಕ್ಕಿ ಅಥವಾಲ್ (7019061026) ಅವರನ್ನು ಸಂಪರ್ಕಿಸಬಹುದು ಎಂದು ರಾಯಚೂರು ವಲಯದ ಬೀದರ್ ಸಂಚಾಲಕ ಕುಶಾಲ ಪಾಟೀಲ್ ಗಾದಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT