
ಬೀದರ್: ಇಲ್ಲಿನ ಬಸವ ನಗರ ಬಡಾವಣೆಯಲ್ಲಿ ಶ್ರೀ ದತ್ತಗಿರಿ ಮಹಾರಾಜ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ‘ಕಲಾ, ವಿಜ್ಞಾನ, ಗಣಿತ ಮತ್ತು ಸಾಮಾಜಿಕ ಜಾಲತಾಣದ ಸತ್ಪರಿಣಾಮ–ದುಷ್ಪರಿಣಾಮ’ ಕುರಿತ ಎರಡು ದಿನಗಳ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.
ವಸ್ತು ಪ್ರದರ್ಶನವನ್ನು ವೈರಾಗ್ಯ ಶಿಖಾಮಣಿ ಅವಧೂತಗಿರಿ ಮಹಾರಾಜ ಉದ್ಘಾಟಿಸಿದರು. ಮಹಾಂತ ಮಹಾಮಂಡಳೇಶ್ವರ ಸಿದ್ದೇಶ್ವರಾನಂದಗಿರಿ ಮಹಾರಾಜ, ಸಂಸ್ಥೆಯ ಪದಾಧಿಕಾರಿಗಳಾದ ಅಶೋಕ ರೆಜೆಂತಲ್, ಮಲ್ಲಿಕಾರ್ಜುನ ಹತ್ತಿ, ಶಿವರಾಜ ಪಾಟೀಲ್, ರಮೇಶ್ ಜಿ. ದುಕಾನದಾರ, ಸಾಯಿರಾಮ ಅಲ್ಲಾಡಿ, ಪ್ರಫುಲ್ ಪಾಂಡೆ, ಪ್ರಭಾಕರ್ ಮೈಲಾಪುರೆ, ಸಂಗಮೇಶ ಹತ್ತಿ, ನವೀನ್ ದುಕಾನದಾರ ಸೇರಿದಂತೆ ಶಾಲೆಯ ಪ್ರಾಂಶುಪಾಲೆ ರೂಪಾ ಜೋಶಿ, ಉಪ ಪ್ರಾಂಶುಪಾಲ ಸಂಜೀವಕುಮಾರ ನೇಳಗೆಕರ್, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರದರ್ಶನದಲ್ಲಿ ಪುರಿ ಜಗನ್ನಾಥ್, ಕೋರ್ಟ್ ಆಫ್ ಜಸ್ಟಿಸ್ (ನ್ಯಾಯಾಲಯ), ಅಷ್ಟಲಕ್ಷ್ಮೀ, ಹಳ್ಳಿಯ ಸೊಗಡು ಸೇರಿದಂತೆ ವಿವಿಧ ಆಕರ್ಷಕ ಮಾದರಿಗಳು ಗಮನ ಸೆಳೆದವು. ಯಕ್ಷಗಾನ ಪ್ರಸ್ತುತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.