ಚಿಟಗುಪ್ಪ: ತಂದೆ ಮಾಡಿದ ಕೃಷಿ ಸಾಲ ತೀರಿಸಲಾಗದೆ ಮಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬನ್ನಳ್ಳಿ ಗ್ರಾಮದಲ್ಲಿ ಜರುಗಿದೆ.
ಶ್ರೀನಿವಾಸರಡ್ಡಿ ನಿರ್ವತರಡ್ಡಿ (31)ಮೃತ ದುರ್ದೈವಿ.
ತಂದೆ ನಿರ್ವತ ರೆಡ್ಡಿ ಅವರು, ‘ಹುಮನಾಬಾದ್, ಮಾಣಿಕನಗರ, ನಿರ್ಣಾ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ಗಳಲ್ಲಿ ಕೃಷಿ ಕೆಲಸಕ್ಕಾಗಿ ಮಾಡಿರುವ ₹6.40 ಲಕ್ಷ ಮೊತ್ತದ ಸಾಲ ಮರುಪಾವತಿಸುವ ಚಿಂತೆಯಲ್ಲಿ ತಂದೆಯೊಂದಿಗೆ ಕೃಷಿ ಮಾಡುತ್ತಿದ್ದ ಶ್ರೀನಿವಾಸ ರಡ್ಡಿ ಅವರು ಶುಕ್ರವಾರ ರಾತ್ರಿ ತಮ್ಮ ಮನೆಯ ಹಿಂಬದಿಯಲ್ಲಿ ಬೆಳೆದ ಪೇರಲ್ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಂದೆ ನಿರ್ವತ ರಡ್ಡಿ ದೂರು ನೀಡಿದ್ದಾರೆ.
ಮನ್ನಾಎಖ್ಖೇಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.