ADVERTISEMENT

2540ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 14:13 IST
Last Updated 25 ಜುಲೈ 2021, 14:13 IST
ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ(ಕೆ) ಗ್ರಾಮದ ಬುದ್ಧ ವಿಹಾರದಲ್ಲಿ ಬುದ್ಧನ ಪ್ರತಿಮೆಗೆ ಸಾಹಿತಿ ಎಸ್.ಎಂ.ಜನವಾಡ್ಕರ್‌ ಪೂಜೆ ಸಲ್ಲಿಸಿದರು. ಕಾಶೀನಾಥರಾವ್ ಫುಲೆ, ಚಂದ್ರಪ್ಪ ಹೆಬ್ಬಾಳಕರ್ ಇದ್ದಾರೆ
ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ(ಕೆ) ಗ್ರಾಮದ ಬುದ್ಧ ವಿಹಾರದಲ್ಲಿ ಬುದ್ಧನ ಪ್ರತಿಮೆಗೆ ಸಾಹಿತಿ ಎಸ್.ಎಂ.ಜನವಾಡ್ಕರ್‌ ಪೂಜೆ ಸಲ್ಲಿಸಿದರು. ಕಾಶೀನಾಥರಾವ್ ಫುಲೆ, ಚಂದ್ರಪ್ಪ ಹೆಬ್ಬಾಳಕರ್ ಇದ್ದಾರೆ   

ಬೀದರ್‌: ಭಾರತೀಯ ಬೌದ್ಧ ಧಮ್ಮ ಚಾರಿಟಬಲ್ ಟ್ರಸ್ಟ್ (ರಿ) ವತಿಯಿಂದ ಹಾಲಹಳ್ಳಿ(ಕೆ) ಗ್ರಾಮದ ಬುದ್ಧ ವಿಹಾರದಲ್ಲಿ 2540ನೇ ಧಮ್ಮ ಚಕ್ರ ಪ್ರವರ್ತನ ದಿನ ಆಚರಿಸಲಾಯಿತು.

ಕಾಶೀನಾಥರಾವ್ ಫುಲೆ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜನವಾಡ್ಕರ್, ಸಾಹಿತಿ ಚಂದ್ರಪ್ಪ ಹೆಬ್ಬಾಳಕರ್ ಕರಬಸಪ್ಪ ಮಳ್ಳಿ, ಮಾಣಿಕ ಜನವಾಡ್ಕರ್ ಪಾಲ್ಗೊಂಡಿದ್ದರು. ಭೀಮಶಾ ನಾಟಿಕರ್ ವಂದಿಸಿದರು.

ವರ್ಷಾವಾಸ ಕಾರ್ಯಕ್ರಮ:ವಿದ್ಯಾನಗರದ ಶ್ರಾವಸ್ಥಿ ಬುದ್ಧ ವಿಹಾರದಲ್ಲಿ ವರ್ಷಾ ವಾಸ ಕಾರ್ಯಕ್ರಮ ನಡೆಯಿತು.

ADVERTISEMENT

ಕೃಷ್ಣಪ್ಪ ಕಾಳೆಕರ್ ಅಧ್ಯಕ್ಷತೆ ವಹಿಸಿದ್ದರು. ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಗೋರನಾಳಕರ್ ಉದ್ಘಾಟಿಸಿದರು.

ಭಾರತೀಯ ಬೌದ್ಧ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಜಪ್ಪ ಗುನಳ್ಳಿಕರ್, ಡಾ.ಬಿಜೋಲಕರ್, ನಿವೃತ್ತ ಶಿಕ್ಷಣಾಧಿಕಾರಿ ಎಸ್.ಬಿ.ಕುಚಬಾಳ, ಗಂಗಮ್ಮ ಫೂಲೆ, ಶಿವರಾಜ್ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.