ADVERTISEMENT

ಬೀದರ್: ಪಂಚಾಯಿತಿಯಿಂದ ಅಂಗವಿಕಲ ಸ್ನೇಹಿ ಶೌಚಾಲಯ ನಿರ್ಮಾಣ

ನಾಗೇಶ ಪ್ರಭಾ
Published 7 ಡಿಸೆಂಬರ್ 2025, 7:03 IST
Last Updated 7 ಡಿಸೆಂಬರ್ 2025, 7:03 IST
<div class="paragraphs"><p>ಬೀದರ್ ತಾಲ್ಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಅಂಗವಿಕಲ ಸ್ನೇಹಿ ಸಾಮೂಹಿಕ ಶೌಚಾಲಯ</p></div>

ಬೀದರ್ ತಾಲ್ಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಅಂಗವಿಕಲ ಸ್ನೇಹಿ ಸಾಮೂಹಿಕ ಶೌಚಾಲಯ

   

ಮಂದಕನಳ್ಳಿ(ಜನವಾಡ): ಬೀದರ್ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವೈಯಕ್ತಿಕ, ಪುರುಷ, ಮಹಿಳಾ ಸಾಮೂಹಿಕ ಶೌಚಾಲಯಗಳು ಇವೆ. ಮಂದಕನಳ್ಳಿ ಗ್ರಾಮ ಪಂಚಾಯಿತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂಗವಿಕಲರಿಗಾಗಿಯೇ ಪ್ರತ್ಯೇಕ ಸಾಮೂಹಿಕ ಶೌಚಾಲಯ ನಿರ್ಮಿಸಿ ಗಮನ ಸೆಳೆದಿದೆ.

15ನೇ ಹಣಕಾಸು ನಿಧಿಯ ಅಂಗವಿಕಲರ ಕಲ್ಯಾಣದ ಅನುದಾನ ಬಳಸಿ ಮಂದಕನಳ್ಳಿ ಗ್ರಾಮದಲ್ಲಿ ಅತ್ಯಾಧುನಿಕ ಸೌಕರ್ಯದ ಅಂಗವಿಕಲ ಸ್ನೇಹಿ ಶೌಚಾಲಯ ಕಟ್ಟಿಸಿದೆ. ಅಂತರರಾಷ್ಟ್ರೀಯ ಅಂಗವಿಕಲರ ದಿನವಾದ ಡಿ. 3ರಂದು ಅಂಗವಿಕಲರ ಬಳಕೆಗೆ ಮುಕ್ತಗೊಳಿಸಿದೆ.

ADVERTISEMENT

ಮನೆಯಲ್ಲಿ ವೈಯಕ್ತಿಕ ಶೌಚಾಲಯ ಇಲ್ಲದ ಅಂಗವಿಕಲರ ಅನುಕೂಲಕ್ಕಾಗಿ ಅಂಗವಿಕಲ ಸ್ನೇಹಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಶೌಚಾಲಯದಲ್ಲಿ ಎರಡು ಶೌಚಗೃಹಗಳು ಇವೆ. ಒಂದು ಪುರುಷರಿಗೆ, ಇನ್ನೊಂದು ಮಹಿಳೆಯರಿಗೆ ಮೀಸಲಿದೆ. ಪುರುಷರ ಶೌಚಗೃಹ ವೆಸ್ಟರ್ನ್ ಹಾಗೂ ಮಹಿಳೆಯರ ಶೌಚಗೃಹ ಇಂಡಿಯನ್ ಆಗಿದೆ. ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಶೌಚಾಲಯ ಮುಂಭಾಗದಲ್ಲಿ ರ‍್ಯಾಂಪ್‌ ನಿರ್ಮಿಸಲಾಗಿದೆ. ಗಾಲಿ ಕುರ್ಚಿ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ಹೇಳುತ್ತಾರೆ ಮಂದಕನಳ್ಳಿ ಪಿಡಿಒ ದೇವಪ್ಪ ಚಾಂಬೋಳೆ.

15ನೇ ಹಣಕಾಸು ನಿಧಿಯ 2023-24 ಹಾಗೂ 2024-25ನೇ ಸಾಲಿನ ಅಂಗವಿಕಲರ ಕಲ್ಯಾಣದ ₹ 3.80 ಲಕ್ಷ ಅನುದಾನದಲ್ಲಿ ಶೌಚಾಲಯ ಕಟ್ಟಲಾಗಿದೆ. ಮೂರು ತಿಂಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಶೌಚಾಲಯ ಸಮೀಪದಲ್ಲೇ ದರ್ಗಾ ಇದೆ. ವಿವಿಧ ಗ್ರಾಮಗಳ ಜನರು ಇಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಅಂಗವಿಕಲರಿಗೆ ಈ ಶೌಚಾಲಯ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಅಂಗವಿಕಲರ ಬಳಕೆಗೆ ಗ್ರಾಮದಲ್ಲಿ ಅಂಗವಿಕಲ ಸ್ನೇಹಿ ಶೌಚಾಲಯ ಕಟ್ಟಿಸಿರುವುದು ಉತ್ತಮ ಬೆಳವಣಿಗೆ. ಅಂಗವಿಕಲರು ಸುಲಭವಾಗಿ ಬಳಸಿಕೊಳ್ಳುವಂತೆ ಶೌಚಾಲಯ ವಿನ್ಯಾಸಗೊಳಿಸಲಾಗಿದೆ ಎಂದು ಗ್ರಾಮದ ಅಂಗವಿಕಲರೊಬ್ಬರು ಹೇಳುತ್ತಾರೆ.

ಅಂಗವಿಕಲ ಸ್ನೇಹಿ ಮಾದರಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಅಂಗವಿಕಲರು ಇದರ ಪ್ರಯೋಜನ ಪಡೆಯಬೇಕು
ದೇವಪ್ಪ ಚಾಂಬೋಳೆ,  ಮಂದಕನಳ್ಳಿ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.