
ಬೀದರ್: ‘ಡಾ.ಅಂಬೇಡ್ಕರರ ಸಮಾನತೆ, ಜ್ಞಾನ, ಚಿಂತನೆಯಿಂದಾಗಿ ಇಡೀ ಜಗತ್ತು ಅವರನ್ನು ಗೌರವಿಸುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ನಗರದಲ್ಲಿ ಭಾನುವಾರ ಡಾ. ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಆಯೋಜಿಸಿದ್ದ ‘ಬುದ್ಧ ಭಾರತ ನಿರ್ಮಾಣ ಸಂಕಲ್ಪ ಸಮಾವೇಶ’ದಲ್ಲಿ ಅವರು ಮಾತನಾಡಿದ ಅವರು, ‘ಬುದ್ಧ ಭಾರತ ನಿರ್ಮಾಣವೆಂದರೆ ವೈಜ್ಞಾನಿಕ ಚಿಂತನೆ, ಶಿಕ್ಷಣ, ಆರೋಗ್ಯ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಸಂಕೇತವಾಗುತ್ತದೆ’ ಎಂದು ಹೇಳಿದರು.
ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಮಾತನಾಡಿ, ‘ಡಾ.ಅಂಬೇಡ್ಕರ್ ಅವರು ಜೀವನಪೂರ್ಣ ಅನುಭವಿಸಿದ ಕಷ್ಟಗಳ ನಡುವೆಯೂ ಸಂವಿಧಾನ ಬರೆಯುವ ಸಂದರ್ಭದಲ್ಲಿ ಯಾರಿಗೂ ತಾರತಮ್ಯ ಮಾಡದೆ ಸಮಾನ ಅವಕಾಶ ನೀಡಿದ ಮಹಾಜ್ಞಾನಿ ಆಗಿದ್ದಾರೆ’ ಎಂದು ಹೇಳಿದರು.
ಮಹಿಳಾ ಹೋರಾಟಗಾರ್ತಿ ಕೆ.ನೀಲಾ ಮಾತನಾಡಿ, ‘ಸಂವಿಧಾನದಿಂದ ಅಧಿಕಾರ ಪಡೆದು, ಅದನ್ನು ಬದಲಿಸುವ ಅಥವಾ ಹಿಂದೂ ರಾಷ್ಟ್ರ ನಿರ್ಮಾಣದ ಹೇಳಿಕೆಗಳು ಅಂಬೇಡ್ಕರ್ ಚಿಂತನೆಗೆ ವಿರುದ್ಧವಾಗಿದೆ. ಆರ್‌ಎಸ್‌ಎಸ್‌ಗೆ ನೈತಿಕತೆ ಇದ್ದರೆ ನೋಂದಣಿ ಮಾಡಿಕೊಳ್ಳಲಿ, ಲೆಕ್ಕಪತ್ರ ನೀಡಲಿ. ವೈವಿಧ್ಯದಲ್ಲಿ ಏಕತೆ ಹೊಂದಿರುವ ಭಾರತದಲ್ಲಿ ಸಂವಿಧಾನ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ’ ಎಂದರು.
ಮಾಜಿ ಸಚಿವ ಬಂಡೆಪ್ಪಾ ಖಾಶೆಂಪುರ ಮಾತನಾಡಿ, ‘ಸಿದ್ದರಾಮಯ್ಯ ಸರ್ಕಾರವು ಎಸ್.ಸಿ, ಎಸ್.ಟಿ ಅನುದಾನವನ್ನು ಸಂವಿಧಾನಬದ್ಧವಾಗಿ ಅನುಷ್ಠಾನ ಮಾಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯವಿದೆ. ಡಾ.ಅಂಬೇಡ್ಕರ್‌ಗೆ ಮೂಲಸೌಕರ್ಯಗಳಿಲ್ಲದಿದ್ದರೂ ವಿಶ್ವಜ್ಞಾನಿಯಾಗಿದ್ದಾರೆ. ಇಂದು ಎಲ್ಲ ಸೌಕರ್ಯಗಳಿದ್ದರೂ ಗುರಿ, ಛಲದ ಕೊರತೆಯಿಂದ ಹಿಂದೆ ಬಿದ್ದಿದ್ದೇವೆ’ ಎಂದು ಹೇಳಿದರು.
ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ, ಸಮಿತಿ ಅಧ್ಯಕ್ಷ ರಮೇಶ ಡಾಕುಳಗಿ, ಮಹೇಶ ಗೋರನಾಳಕರ, ಅನೀಲಕುಮಾರ ಬೆಲ್ದಾರ, ಬೀದರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಗ್ಯಾರಂಟಿ ಯೋಜನೆ ಜಿಲ್ಲಾ ಅಧ್ಯಕ್ಷ ಅಮೃತ ಚಿಮಕೊಡ, ಕಾರ್ಯನಿರತ ಪತ್ರಕರ್ತರ ಸಂಘದ ಅಡಕ್ ಅಧ್ಯಕ್ಷ ಆನಂದ ದೇವಪ್ಪ, ವಿಸ್ಡಂ ಸಂಸ್ಥೆ ಅಧ್ಯಕ್ಷ ಎಂ.ಡಿ. ಆಸಿಫೋದ್ದಿನ್, ಹಿಂದೂಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಸವರಾಜ ಮಾಳಗೆ, ಸುಮಂತ ಕಟ್ಟಿಮನಿ, ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ದೊಡ್ಡಿ, ಸದಸ್ಯೆ ಉಲಾಸಿನಿ ಮುದಾಳೆ, ಪ್ರಕಾಶ ಮಾಳಗೆ, ಶಿವಕುಮಾರ ನಿಲಿಕಟ್ಟಿ, ಸಾಯಿ ಶಿಂದೆ, ಬಾಬುರಾವ ಪಾಸ್ವಾನ, ಶ್ರೀಪತರಾವ ದೀನೆ, ಡಾ.ಕಾಶಿನಾಥ ಚೆಲ್ವಾ, ದಶರಥ ಗುರು, ಬಕ್ಕಪ್ಪ ದಂಡಿನ, ಅಂಬಾದಾಸ ಗಾಯಕವಾಡ ಅಶೋಕ ಮಾಳಗೆ, ಉಪಾಧ್ಯಕ್ಷರಾದ ಲುಂಬಿಣಿ ಗೌತಮ, ವಿಜಯದಶಮಿ ಗೂನ್ನಳ್ಳಿಕರ, ಇಂದುಮತಿ ಸಾಗರ, ರಂಜಿತಾ ಜೈನೋರ, ರಾಜಕುಮಾರ ಬನ್ನೆರ, ಪ್ರದೀಪ ನಾಟೇಕರ, ಸಂದೀಪ ಕಾಂಟೆ, ಮಾರುತಿ ಕಂಟಿ, ರಮೇಶ ಸಾಗರ, ಬಾಬುರಾವ ಮಿಠಾರೆ, ಸತೀಶ ಲಕ್ಕಿ, ಸುನೀಲ ಸಂಗಮ, ರಾಜಕುಮಾರ ಶೇರಿಕಾರ, ಪ್ರಕಾಶ ರಾವಣ ಪುಟ್ಟರಾಜ ದಿನೆ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.