ಹುಮನಾಬಾದ್: ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ ಸಿದ್ದಲಿಂಗಪ್ಪ ಪಾಟೀಲ ತಿಳಿಸಿದರು.
ತಾಲ್ಲೂಕಿನ ಹುಡಗಿ ಗ್ರಾಮದಲ್ಲಿನ ಕಾರಂಜಾ ಜಲಾಶಯದ ಪಂಪ್ ಹೌಸ್ ಗೆ ಭೇಟಿ ನೀಡಿ ಅವರು ಮಾತನಾಡಿದರು. ಕಳೆದ ಒಂದು ವಾರದಿಂದ ಹುಮನಾಬಾದ್ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗುತ್ತಿದೆ. ನೀರಿನ ಪಂಪ್ ಸೆಟ್ ಏಕೆ ಪದೇ ಪದೇ ಹಾಳಾಗುತ್ತಿದೆ. ಇನ್ನೊಂದು ಹೆಚ್ಚುವರಿ ಪಂಪ್ ಸೆಟ್ ತೆಗೆದುಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಅದರ ಉಪಯೋಗ ಪಡೆಯಬೇಕು ಎಂದು ಅಧಿಕಾರಿಗಳೇ ಸೂಚನೆ ನೀಡಿದರು. ಮೆಷಿನ್ ಗಳಲ್ಲಿ ಏನಾದರೂ ವ್ಯತ್ಯಾಸ ಆದರೂ ಸಹ ತಕ್ಷಣ ರಿಪೇರಿ ಮಾಡಿಸಿ ಜನರಿಗೆ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ, ಪುರಸಭೆ ಮುಖ್ಯಾಧಿಕಾರಿ ವನಿತಾ, ಪುರಸಭೆ ಸದಸ್ಯರಾದ ಸದಸ್ಯ ರಮೇಶ ಕಲ್ಲೂರ್, ವಿಜಯಕುಮಾರ್ ದುರ್ಗಾದ, ಆನಿಲ ಪಸರಗಿ , ಸಂತೋಷ್ ಪಾಟೀಲ, ಶಿವು ಮಾಶಟ್ಟಿ, ಲಿಂಗರಾಜ ಮೇಲ್ದೋಡಿ, ಮೋಹನ್ ಚೌಹಾಣ್ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.