ADVERTISEMENT

ಭೂಕಂಪನ: ಭಯದಿಂದ ಮನೆಯಿಂದ ಹೊರ ಬಂದ ಜನ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 18:46 IST
Last Updated 12 ಡಿಸೆಂಬರ್ 2021, 18:46 IST

ಚಿಟಗುಪ್ಪ: ತಾಲ್ಲೂಕಿನ ಕುಡಂಬಲ್‌ ಗ್ರಾಮದಲ್ಲಿ ಭಾನುವಾರ ರಾತ್ರಿ 7ರ ಸುಮಾರಿಗೆ ಹಲವು ಬಾರಿ ದೊಡ್ಡ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಸದ್ದು ಗ್ರಾಮಸ್ಥರಿಗೆ ಕೇಳಿಸಿದೆ.

ಭಾರಿ ಪ್ರಮಾಣದ ಸದ್ದಿಗೆ ಮನೆಗಳಲ್ಲಿನ ಫ್ರಡ್ಜ್‌ನಂತಹ ವಸ್ತುಗಳು ಅಲುಗಾಡಿದರೆ, ಗೋಡೆಗಳಿಗೆ ನೇತು ಹಾಕಿದ ಚಿತ್ರಗಳು ಕೆಳಗಡೆ ಬಿದ್ದವು. ಇದರಿಂದ ಭಯಗೊಂಡ ನಿವಾಸಿಗಳು ಮಕ್ಕಳೊಂದಿಗೆ ಮನೆಯಿಂದ ಹೊರಗೆ ಓಡಿ ಬಂದರು. ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದ ಕಟ್ಟೆಯ ಮೇಲೆ ಪುರುಷರು ಕೂತಿದ್ದಾರೆ. ಮಹಿಳೆಯರು ತಮ್ಮ ಮನೆಯ ಹೊರಗಡೆಯ ಕಟ್ಟೆಗಳ ಮೇಲೆ ಚಳಿಯ ನಡುವೆ ರಾತ್ರಿ ಇಡೀ ಕಾಲ ಕಳೆದರು.

ತಾಲ್ಲೂಕು ವ್ಯಾಪ್ತಿಯ ಶಾಮತಾಬಾದ್‌ ಗ್ರಾಮದಲ್ಲೂ ಕಳೆದ ವರ್ಷದಿಂದ ಆಗಾಗ ಭೂಕಂಪನದ ಅನುಭವ ಆಗುತ್ತಿದೆ. ಈ ಕುರಿತು ಈಗಾಗಲೇ ಭೂ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ.

ADVERTISEMENT

ಈ ಗ್ರಾಮಕ್ಕೆ ಭೇಟಿ ನೀಡಿದ್ದ ಕೇಂದ್ರ ವಿಜ್ಞಾನಿಗಳ ತಂಡ, ‘ಭೂಮಿ ಒಳಗೆ ಕಲ್ಲಿನ ಪದರಗಳು ಸರಿದಾಗ ಈ ರೀತಿ ಭೂಕಂಪನ ಮತ್ತು ಶಬ್ಧದ ಅನುಭವವಾಗುತ್ತದೆ. ಇದು ಭೂಕಂಪನವಲ್ಲ’ ಎಂದು ಈಗಾಗಲೇ ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಮಹೇಂದ್ರ ಕುಮಾರ, ಗ್ರಾಮಸ್ಥರಿಗೆ ಧೈರ್ಯ ತುಂಬಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.