ADVERTISEMENT

‘ಪರಿಶ್ರಮದಿಂದ ಗುರಿ ಮುಟ್ಟಲು ಸಾಧ್ಯ’

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 10:29 IST
Last Updated 12 ನವೆಂಬರ್ 2019, 10:29 IST
ಹುಮನಾಬಾದ್‍ ಪಟ್ಟಣದಲ್ಲಿ ಭಾನುವಾರ ನಡೆದ ಮೌಲ್ಯ ಪ್ರೇರಣಾ ಹಾಗೂ ನೇರ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಕ ಪಂಡಿತ ಬಾಳೂರೆ ಮಾತನಾಡಿದರು
ಹುಮನಾಬಾದ್‍ ಪಟ್ಟಣದಲ್ಲಿ ಭಾನುವಾರ ನಡೆದ ಮೌಲ್ಯ ಪ್ರೇರಣಾ ಹಾಗೂ ನೇರ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಕ ಪಂಡಿತ ಬಾಳೂರೆ ಮಾತನಾಡಿದರು   

ಹುಮನಾಬಾದ್: ‘ಸತತ ವಿದ್ಯಾಭ್ಯಾಸದಿಂದ ಗುರಿ ಮುಟ್ಟಲು ಸಾಧ್ಯ’ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ತಾಲ್ಲೂಕು ಘಟಕದ ಅಧ್ಯಕ್ಷ ಪಂಡಿತ ಬಾಳೂರೆ ಅಭಿಪ್ರಾಯಪಟ್ಟರು.

ಪಟ್ಟಣದ ಜ್ಞಾನಜ್ಯೋತಿ ಎಜ್ಯುಕೇಶನ್, ಚಾರಿಟೇಬಲ್ ಟ್ರಸ್ಟ್‌, ಡಾ,ಎಪಿಜೆ ಅಬ್ದುಲ್ ಕಲಾಂ ಟ್ಯುಟೋರಿಯಲ್‍ನಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮೌಲ್ಯ ಪ್ರೇರಣಾ ಹಾಗೂ ನೇರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಶಿಕ್ಷಣದಲ್ಲಿರುವ ಮೌಲ್ಯಗಳನ್ನು ಕಾಪಾಡಿಕೊಂಡು ಹೋಗುವ ಜತೆಗೆ ತಂದೆ, ತಾಯಿ, ಗುರು, ಹಿರಿಯರನ್ನು ಗೌರವಿಸಬೇಕು ಎಂದರು.

ADVERTISEMENT

ಡಾ.ಅಂಬೇಡ್ಕರ್ ಅವರು ಜ್ಞಾನದ ಜ್ಯೋತಿಯಾಗಿ ಉನ್ನತ ಶಿಕ್ಷಣ ಪಡೆದು ದೇಶಕ್ಕೆ ಬೆಳಕು ನೀಡಿದ್ದಾರೆ. ಅವರನ್ನು ವಿದ್ಯಾರ್ಥಿಗಳು ಆದರ್ಶವಾಗಿಟ್ಟುಕೊಂಡು ಉನ್ನತ ವಿದ್ಯೆ ಕಲಿತು ದೇಶಕ್ಕೆ ಸಮಾಜಕ್ಕೆ ಕೀರ್ತಿ ತರಬೇಕು ಎಂದುಕರೆ ನೀಡಿದರು.

ಯುವ ಮುಖಂಡ ಸಿದ್ದು ಪಾಟೀಲ, ಹಿರಿಯ ಉಪನ್ಯಾಸಕ ಬಿ.ಎನ್‌.ಪಾಟೀಲ, ಶಿಕ್ಷಕ ಯುವ ಸಾಹಿತಿ ಕೆ. ವೀರಾರಡ್ಡಿ, ಸಾಹಿತಿ ಶಕೀಲ್ ಐಎಸ್, ಯುವ ಮುಖಂಡ ಮಲ್ಲಿಕಾರ್ಜುನ ಶರ್ಮಾ ಹಾಗೂ ರಾಜು ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.