ADVERTISEMENT

ಔರಾದ್| ತಾಳೆಯಾಗದ ಗುರುತು,ಸಿಗದ ಪಡಿತರ: ಶಾಸಕರು, ಅಧಿಕಾರಿಗಳ ಎದುರು ವೃದ್ಧರ ಗೋಳು

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 4:58 IST
Last Updated 22 ಜನವರಿ 2026, 4:58 IST
ಔರಾದ್ ತಾಲ್ಲೂಕಿನ ಕೊಳ್ಳೂರ್ ಗ್ರಾಮಸ್ಥರು ತಮ್ಮ ಸಮಸ್ಯೆ ಪರಿಹರಿಸಲು ಶಾಸಕ ಪ್ರಭು ಚವಾಣ್ ಅವರಿಗೆ ಮನವಿಪತ್ರ ಸಲ್ಲಿಸಿದರು
ಔರಾದ್ ತಾಲ್ಲೂಕಿನ ಕೊಳ್ಳೂರ್ ಗ್ರಾಮಸ್ಥರು ತಮ್ಮ ಸಮಸ್ಯೆ ಪರಿಹರಿಸಲು ಶಾಸಕ ಪ್ರಭು ಚವಾಣ್ ಅವರಿಗೆ ಮನವಿಪತ್ರ ಸಲ್ಲಿಸಿದರು   

ಔರಾದ್: ಪಡಿತರ ಸೌಲಭ್ಯ ಪಡೆಯಲು ಬೆರಳು ಗುರುತು ಕಡ್ಡಾಯವಾಗಿದೆ. ಆದರೆ ವಯಸ್ಸಾದ ಕಾರಣ ಬೆರಳು ಗುರುತು ನೀಡಲು ಆಗುತ್ತಿಲ್ಲ. ಇದರಿಂದ ಪ್ರತಿ ತಿಂಗಳು ಸಿಗುವ ಪಡಿತರ ಧಾನ್ಯ ಸಿಗುತ್ತಿಲ್ಲ ಎಂದು ವಿವಿಧ ಗ್ರಾಮಗಳ ವೃದ್ಧರು ಗೋಳು ತೋಡಿಕೊಂಡರು.

ಶಾಸಕ ಪ್ರಭು ಚವಾಣ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಬುಧವಾರ ತಾಲ್ಲೂಕಿನ ಬರದಾಪೂರ ಗ್ರಾಮದಲ್ಲಿ ನಡೆಸಿದ ಗ್ರಾಮ ಸಂಚಾರ ಸಭೆ ವೇಳೆ ವೃದ್ಧ ಮಹಿಳೆಯೊಬ್ಬರು ‘ನನಗೆ ನಾಲ್ಕೈದು ತಿಂಗಳಿನಿಂದ ಪಡಿತರ ಧಾನ್ಯ ಸಿಗುತ್ತಿಲ್ಲ. ಇದಕ್ಕಾಗಿ ಅನೇಕ ಬಾರಿ ತಹಶೀಲ್ದಾರ್ ಕಚೇರಿಗೆ ಹೋಗಿ ಬಂದರೂ ಕೆಲಸ ಆಗಿಲ್ಲ’ ಎಂದು ಗೋಳು ತೋಡಿಕೊಂಡರು.

ಗ್ರಾಮ ಸಂಚಾರದ ವೇಳೆ ಅನೇಕ ಊರುಗಳಲ್ಲಿ ವೃದ್ಧರು ಇದೇ ಸಮಸ್ಯೆ ಹೇಳಿಕೊಂಡಿದ್ದಾರೆ. ಹಿರಿಯರನ್ನು ಈ ರೀತಿ ಅಲೆದಾಡಿಸುವುದು ಸರಿಯಲ್ಲ. ಇಂತಹ ಎಷ್ಟು ಜನ ಇದ್ದಾರೆ ಎಂಬುದು ಗುರುತಿಸಿ ಅವರೆಲ್ಲರಿಗೂ ಮುಂದಿನ ತಿಂಗಳಿನಿಂದ ಪಡಿತರ ಧಾನ್ಯ ಸಿಗುವಂತೆ ನೋಡಿಕೊಳ್ಳಬೇಕು ಎಂದು ಶಾಸಕರು ತಹಶೀಲ್ದಾರ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಬೋರಾಳ, ತುಳಜಾಪೂರ, ಎಕಲಾರ, ಕೊಳ್ಳೂರ, ಬರ್ದಾಪೂರ, ಲಿಂಗದಳ್ಳಿ, ನಾಗೂರ, ಬೋರ್ಗಿ(ಜೆ) ಗ್ರಾಮಗಳಲ್ಲಿ ಸಭೆ ನಡೆಸಿದರು. ಅತಿವೃಷ್ಟಿ ಪರಿಹಾರ ನಮಗೆ ಬಂದಿಲ್ಲ ಎಂದು ಈ ಗ್ರಾಮಗಳ ರೈತರು ಕೇಳಿಕೊಂಡರು. ನಮ್ಮ ತಾಲ್ಲೂಕಿನ ಅನೇಕ ರೈತರಿಗೆ ಇನ್ನು ಅತಿವೃಷ್ಟಿ ಪರಿಹಾರ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಎಲ್ಲ ರೈತರಿಗೆ ಪರಿಹಾರ ಸಿಗುವಂತೆ ನೋಡಿಕೊಳ್ಳಬೇಕು ಎಂದು ಶಾಸಕರು ಕೃಷಿ ಅಧಿಕಾರಿಗಳಿಗೆ ತಿಳಿಸಿದರು.

ತಹಶೀಲ್ದಾರ್ ಮಹೇಶ ಪಾಟೀಲ, ತಾಪಂ. ಇಒ ಕಿರಣ ಪಾಟೀಲ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಗಾಯತ್ರಿ, ಲೋಕೋಪಯೋಗಿ ಇಲಾಖೆ ಎಇಇ ಪ್ರೇಮಸಾಗರ, ಮುಖಂಡ ಶಿವಾಜಿರಾವ ಪಾಟೀಲ, ಶಿವರಾಜ ಅಲ್ಮಾಜೆ, ಸಚಿನ ರಾಠೋಡ್, ಸಾಗರ ಪಾಟೀಲ, ಮಾರುತಿ ಶೆಟ್ಟೆ, ಜೈಪಾಲರೆಡ್ಡಿ, ವಾಮನರಾವ ಪಾಟೀಲ, ವಿಜಯಕುಮಾರ ನಾಗೂರ, ಸಂಗಮೇಶ ಬೋರ್ಗಿ, ಬಾಬುರಾವ ಶೆಟ್ಟೆಪ್ಪ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.