ADVERTISEMENT

ಬೇಡಜಂಗಮ ಪ್ರಮಾಣಪತ್ರ ನೀಡದಿದ್ದರೆ ಚುನಾವಣೆ ಬಹಿಷ್ಕಾರ

ಸಮಾಜದ ಜಿಲ್ಲಾ ಸಮಿತಿಯಿಂದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 7:21 IST
Last Updated 4 ಡಿಸೆಂಬರ್ 2020, 7:21 IST
ಬಸವಕಲ್ಯಾಣದ ಉಪ ತಹಶೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಗುರುವಾರ ಬೇಡಜಂಗಮ ಜಾತಿ ಪ್ರಮಾಣಪತ್ರಕ್ಕಾಗಿ ಆಗ್ರಹಿಸಿ ಮನವಿಪತ್ರ ಸಲ್ಲಿಸಲಾಯಿತು
ಬಸವಕಲ್ಯಾಣದ ಉಪ ತಹಶೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಗುರುವಾರ ಬೇಡಜಂಗಮ ಜಾತಿ ಪ್ರಮಾಣಪತ್ರಕ್ಕಾಗಿ ಆಗ್ರಹಿಸಿ ಮನವಿಪತ್ರ ಸಲ್ಲಿಸಲಾಯಿತು   

ಬಸವಕಲ್ಯಾಣ: ಬೇಡಜಂಗಮ ಜಾತಿ ಪ್ರಮಾಣಪತ್ರ ಶೀಘ್ರವೇ ಒದಗಿಸಬೇಕು. ಇಲ್ಲದಿದ್ದರೆ ಈ ಕ್ಷೇತ್ರದ ಉಪ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಮುಖ್ಯಮಂತ್ರಿ ಅವರಿಗೆ ಬರೆದ ಮನವಿಪತ್ರವನ್ನು ಗುರುವಾರ ಇಲ್ಲಿನ ಉಪ ತಹಶೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಸಲ್ಲಿಸಲಾಯಿತು.

ಬೇಡಜಂಗಮ ಸಮಾಜ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಸವರಾಜಸ್ವಾಮಿ ತ್ರಿಪುರಾಂತ ಮಾತನಾಡಿ, ‘ಬೇಡಜಂಗಮ ಜಾತಿ ಪ್ರಮಾಣಪತ್ರ ನೀಡಲು ಅನೇಕ ವರ್ಷಗಳಿಂದ ಆಗ್ರಹಿಸುತ್ತಿದ್ದರೂ ಸರ್ಕಾರ ಲಕ್ಷ್ಯ ಕೊಡುತ್ತಿಲ್ಲ. ಆದ್ದರಿಂದ ಶೀಘ್ರವೇ ಇಲ್ಲಿ ರಾಜ್ಯಮಟ್ಟದ ಸಮಾವೇಶ ಆಯೋಜಿಸಿ ಹೋರಾಟಕ್ಕೆ ನಾಂದಿ ಹಾಡಲಾಗುವುದು. ಇದಲ್ಲದೆ ಈ ಕ್ಷೇತ್ರದಲ್ಲಿ ಸಮಾಜದ 25 ಸಾವಿರದಷ್ಟು ನಿರ್ಣಾಯಕ ಮತದಾರರಿದ್ದು ಉಪ ಚುನಾವಣೆಯಲ್ಲಿ ಮತದಾನ ಮಾಡದಿರಲು ಸಮಾಜದ ಸಭೆ ಆಯೋಜಿಸಿ ನಿರ್ಧರಿಸಲಾಗಿದೆ’ ಎಂದರು.

ಮುಖಂಡ ರವೀಂದ್ರ ಸ್ವಾಮಿ ಮಾತನಾಡಿದರು.

ADVERTISEMENT

ಸಂಜೀವಕುಮಾರ ಮಠಪತಿ ಮಾತನಾಡಿ, ‘ಸಮಾಜ ಬಾಂಧವರು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಬೇಡಜಂಗಮ ಜಾತಿ ಪ್ರಮಾಣಪತ್ರ ಅತ್ಯವಶ್ಯಕವಾಗಿದೆ’ ಎಂದು ಹೇಳಿದರು.

ಡಾ.ಎಸ್.ಸಿ.ಕಳ್ಳಿಮಠ ಮಾತನಾಡಿ, ‘ಸಮಾಜ ಸಂಘಟಿತವಾಗಿ ಹೋರಾಟ ನಡೆಸುವವರೆಗೆ ಸರ್ಕಾರ ಹೀಗೆಯೇ ನಿರ್ಲಕ್ಷ್ಯವಹಿಸುತ್ತದೆ’ ಎಂದರು.

ವಕೀಲ ನಾಗೇಂದ್ರ ಸ್ವಾಮಿ, ಪ್ರಮುಖರಾದ ಮಲ್ಲಯ್ಯ ಸ್ವಾಮಿ, ಪಂಚಾಕ್ಷರಿ ಹಿರೇಮಠ, ರೇಣುಕಾ ಮಠಪತಿ, ಹುಮನಾಬಾದ್‌ ತಾಲ್ಲೂಕು ಘಟಕದ ಅಧ್ಯಕ್ಷ ಬಸಯ್ಯ ಟೆಂಗಿನಮಠ, ಔರಾದ್ ತಾಲ್ಲೂಕು ಘಟಕದ ಅಧ್ಯಕ್ಷ ವೈಜನಾಥ ವಡ್ಡೆ, ಬಸವತೀರ್ಥಯ್ಯ ಕಾಡಾದಿ, ಪ್ರಭುಲಿಂಗಯ್ಯ ಟಂಕಸಾಲಿಮಠ, ಬಸವರಾಜಸ್ವಾಮಿ ಬಟಗೇರಾ, ರವಿಸ್ವಾಮಿ ನಾರಾಯಣಪುರ, ಚಿದಾನಂದ ಸ್ವಾಮಿ, ರಾಚಯ್ಯ ಮಠಪತಿ, ಘನಲಿಂಗಯ್ಯ ಮಠ ಶರಣನಗರ, ಶಾಂತವೀರ ಪೂಜಾರಿ, ಶ್ರೀಕಾಂತಸ್ವಾಮಿ ಬೀದರ್, ಬೂದಯ್ಯ ಮಠಪತಿ, ಸದಾನಂದ ಕಣಜೆ, ರೇವಣಸಿದ್ದಯ್ಯ ಮಠಪತಿ, ಶಿವಪುತ್ರ ಸಾಲಿಮಠ, ಶಿವಲಿಂಗಯ್ಯ ಭಾಲ್ಕಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.