ADVERTISEMENT

ಹುಮನಾಬಾದ್: ಆನೆಕಾಲು ರೋಗ ನಿಯಂತ್ರಣ ಜಾಗೃತಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 12:06 IST
Last Updated 27 ಸೆಪ್ಟೆಂಬರ್ 2020, 12:06 IST
ಹುಮನಾಬಾದ್‍ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ಜಾಗೃತಿ ಕಾರ್ಯಕ್ರಮದಲ್ಲಿ ಆನೆಕಾಲು ರೋಗ ಬಂದಿರುವ ರೋಗಿಗಳಿಗೆ ಆರೈಕೆ ಕಿಟ್‌ಗಳನ್ನು ವಿತರಿಸಲಾಯಿತು
ಹುಮನಾಬಾದ್‍ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ಜಾಗೃತಿ ಕಾರ್ಯಕ್ರಮದಲ್ಲಿ ಆನೆಕಾಲು ರೋಗ ಬಂದಿರುವ ರೋಗಿಗಳಿಗೆ ಆರೈಕೆ ಕಿಟ್‌ಗಳನ್ನು ವಿತರಿಸಲಾಯಿತು   

ಹುಮನಾಬಾದ್: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ಜಾಗೃತಿ ಮತ್ತು ಆರೈಕೆ ಕಿಟ್ ವಿತರಣಾ ಕಾರ್ಯಕ್ರಮ ಜರುಗಿತು.

ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ನಾಗನಾಥ ಹುಲಸೂರೆ ಮಾತನಾಡಿ,‘ಆನೆಕಾಲು ರೋಗದಿಂದ ದೇಹದ ಮುಖ್ಯ ಭಾಗವಾದ ಕಾಲು ಊದಿಕೊಂಡು ವ್ಯಕ್ತಿಯು ದೈಹಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಕುಗ್ಗುತ್ತಾನೆ’ ಎಂದರು.

ಆನೆಕಾಲು ರೋಗ ಬರದಂತೆ ತಡೆಯಲು ಮುಂಜಾಗ್ರತೆ ವಹಿಸಬೇಕು. ಮುಂಬರುವ ತಿಂಗಳಿನ 17ನೇ ಸುತ್ತಿನ ಆನೆಕಾಲು ರೋಗ ನಿಯಂತ್ರಣದ ಸಾಮೂಹಿಕ ಔಷಧಿ ನುಂಗಿಸುವ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಡಿಇಸಿ ಮಾತ್ರೆಗಳನ್ನು ಸೇವಿಸಬೇಕು ಎಂದು ತಿಳಿಸಿದರು.

ADVERTISEMENT

ಪಟ್ಟಣದ ಶಿವಪುರಗಲ್ಲಿ ಮತ್ತು ಜೇರಪೇಟದಲ್ಲಿ ಆನೆಕಾಲು ಪ್ರಕರಣ ಜಾಸ್ತಿ ಇರುವ ಕಾರಣ 600 ಜನರ ರಕ್ತ ಲೇಪನ ಸ್ಯಾಂಪಲ್ ಪಡೆದು ಪರೀಕ್ಷೆಗೆ ರವಾನಿಸಲಾಗಿದೆ. ಆನೆಕಾಲು ರೋಗಿಗಳ ಆರೈಕೆಗಾಗಿ 50 ಜನರಿಗೆ ಔಷಧಿ ಕಿಟ್‍ಗಳನ್ನು ವಿತರಿಸಲಾಗಿದೆ ಎಂದರು.

ಹಿರಿಯ ವೈದ್ಯ ಡಾ. ಬಸವಂತರಾವ್ ಗುಮ್ಮೇದ್, ಶಿವಕುಮಾರ ಕಿವಡೆ, ಶಂಕರೆಪ್ಪಾ, ಆರೋಗ್ಯ ಕಿರಿಯ ಆರೋಗ್ಯ ಸಹಾಯಕ ಶಂಕ್ರೆಪ್ಪಾ, ಆರೋಗ್ಯ ಕಾರ್ಯಕರ್ತರಾದ ತೌಸೀಫ್, ಶರಣು ಹಾಗೂ ಶ್ವೇತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.