ADVERTISEMENT

ಖೋಟಾ ನೋಟು ಚಲಾವಣೆ: ಬಂಧನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 16:08 IST
Last Updated 27 ನವೆಂಬರ್ 2022, 16:08 IST
ಖಮರೊದ್ದೀನ್ ಕಾಜಿ
ಖಮರೊದ್ದೀನ್ ಕಾಜಿ   

ಬಸವಕಲ್ಯಾಣ: ತಾಲ್ಲೂಕಿನ ಮಂಠಾಳದಲ್ಲಿ ಖೋಟಾ ನೋಟು ಚಲಾವಣೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಲಾತೂರ್ ನಿವಾಸಿ ಖಮರೊದ್ದೀನ್ ಖಾಜಾ ಅಹ್ಮದ್ ಕಾಜಿ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಇನ್ನೂ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆರೋಪಿಯು ಖೋಟಾ ನೋಟುಗಳನ್ನು ಮಂಠಾಳದ ನಿವಾಸಿ ತಸ್ಲೀಮ್ ಅಜಿಮೊದ್ದೀನ್ ಪಿಂಜಾರ್ ಎನ್ನುವವನಿಗೆ ಚಲಾವಣೆಗಾಗಿ ನೀಡಿದ್ದರು. ಆದ್ದರಿಂದ ತಸ್ಲೀಮ್ ಗ್ರಾಮದ ಸರ್ಕಾರಿ ಆಸ್ಪತ್ರೆ ಬಳಿಯಲ್ಲಿ ನೋಟುಗಳನ್ನು ಬೇರೆಯವರಿಗೆ ನೀಡುತ್ತಿದ್ದರು. ಆಗ ಗಸ್ತಿನಲ್ಲಿದ್ದ ಪೊಲೀಸರಿಗೆ ಈ ಬಗ್ಗೆ ಸಂಶಯ ಬಂದಿದ್ದರಿಂದ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ADVERTISEMENT

ಖಮರೊ ದ್ದೀನ್‌ ಮಹಾ ರಾಷ್ಟ್ರದ ನಾಂದೇಡ್ ನಿವಾಸಿ ಅಬ್ದುಲ್ ಹಬೀಬ್ ಎನ್ನುವಾತನಿಂದ ₹200 ಮುಖಬೆಲೆಯ 220 ನೋಟುಗಳನ್ನು ಅಂದರೆ ₹44 ಸಾವಿರ ಪಡೆದಿದ್ದ. ಅದನ್ನು ಮಂಠಾಳದ ಸಂಬಂಧಿಕನಾದ ತಸ್ಲೀಮ್‌ಗೆ ಒಪ್ಪಿಸಿದ್ದರು ಎನ್ನಲಾಗಿದೆ. ಮಂಠಾಳ ಠಾಣೆ ಸಿಪಿಐ ವಿಜಯಕುಮಾರ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.