ADVERTISEMENT

ವಿಷ ಸೇವಿಸಿದ್ದ ರೈತ ಸಾವು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 7:41 IST
Last Updated 4 ಮಾರ್ಚ್ 2026, 7:41 IST
ವಿಷ್ಣುಕಾಂತ ಮಧುಕರ ಹಿಲಾಪೂರೆ (40) ಮೃತರು.
ವಿಷ್ಣುಕಾಂತ ಮಧುಕರ ಹಿಲಾಪೂರೆ (40) ಮೃತರು.   

ಹುಲಸೂರ: ಸಮೀಪದ ಮೆಹಕರ ಗ್ರಾಮದಲ್ಲಿ ಕೃಷಿ ಸಾಲದ ಒತ್ತಡದಿಂದ ಮನನೊಂದ ರೈತರೊಬ್ಬರು ವಿಷ ಸೇವಿಸಿ ಮೃತಟ್ಟಿದ್ದಾರೆ. 

ವಿಷ್ಣುಕಾಂತ ಮಧುಕರ ಹಿಲಾಪೂರೆ (40) ಮೃತರು. ಇವರು ಮೇಹಕರ ಶಿವಾರದಲ್ಲಿರುವ ಕುಟುಂಬದ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ವಿವಿಧ ಬ್ಯಾಂಕ್‌ಗಳು ಮತ್ತು ಖಾಸಗಿ ಸಂಘಗಳಿಂದ ಪಡೆದಿದ್ದ ಕೃಷಿ ಸಾಲ ತೀರಿಸಲಾಗುತ್ತಿರಲಿಲ್ಲ. ಬಡ್ಡಿಯೂ ಹೆಚ್ಚಾಗುತ್ತಿತ್ತು. ಬೆಳೆ ಸಹ ಸರಿಯಾಗಿ ಬಾರದ ಕಾರಣ ಸಾಲದ ಒತ್ತಡ ಹೆಚ್ಚಾಗಿ ಮನನೊಂದು ಆತಂಕ ವ್ಯಕ್ತಪಡಿಸುತ್ತಿದ್ದರು ಎಂದು ಕುಂಟುಂಬದವರು ತಿಳಿಸಿದ್ದಾರೆ. 

ADVERTISEMENT

ಫೆಬ್ರವರಿ 28ರಂದು ಬೆಳಿಗ್ಗೆ ಹೊಲಕ್ಕೆ ತೆರಳಿದ್ದ ಅವರು ಸಂಜೆ ವೇಳೆಗೆ ಹೊಲದಲ್ಲಿದ್ದ ಶೆಡ್‌ನಲ್ಲಿ ಕೀಟನಾಶಕ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು. ತಕ್ಷಣ ಅವರನ್ನು ಹುಲಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಬೀದರ್‌ನ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮಾ.3ರಂದು ಮುಂಜಾನೆ ಮೃತಪಟ್ಟಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ಮೇಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.