ADVERTISEMENT

ಔರಾದ್‌: ನಿವೃತ್ತ ಸೈನಿಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 3:55 IST
Last Updated 22 ಏಪ್ರಿಲ್ 2022, 3:55 IST
ಔರಾದ್ ಪಟ್ಟಣದಲ್ಲಿ ನಿವೃತ್ತ ಸೈನಿಕರನ್ನು ಗೌರವಿಸಲಾಯಿತು
ಔರಾದ್ ಪಟ್ಟಣದಲ್ಲಿ ನಿವೃತ್ತ ಸೈನಿಕರನ್ನು ಗೌರವಿಸಲಾಯಿತು   

ಔರಾದ್: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಪಟ್ಟಣದ ಅಮರೇಶ್ವರ ಗೋ ಶಾಲೆಯಲ್ಲಿ ಬುಧವಾರ ಭಾರತೀಯ ಜನತಾ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು.

ನಿವೃತ್ತ ಸೈನಿಕ ಶರಣಪ್ಪ ವಲ್ಲೆಪುರೆ, ಮಹಾದೇವ ಕೋಟೆ, ಸಿದ್ದಯ್ಯ ಸ್ವಾಮಿ, ನರಸಿಂಗ ಗಡದೆ, ಅಶೋಕ ಕರಂಜಿ, ನಾಗರಾಜ ಗಾಯಕವಾಡ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಅವರು ಮಾತನಾಡಿ,‘ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ಇಂಥ ಕಾರ್ಯಕ್ರಮಗಳು ನಡೆಯುತ್ತಿವೆ. ದೇಶ ಸ್ವಾತಂತ್ರ್ಯ ಸಿಕ್ಕ 75ನೇ ವರ್ಷಾಚರಣೆ ಅಂಗವಾಗಿ ದೇಶಕ್ಕಾಗಿ ದುಡಿದವರನ್ನು ಗುರುತಿಸಿ ಗೌರವಿಸಲಾಗುತ್ತಿದೆ’ ಎಂದು ಅವರು ಹೇಳಿದರು.

‘ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ವಿವಿಧ ಜನಪರ ಕೆಲಸ ಮಾಡುವವರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ’ ಎಂದು ಅವರು ಹೇಳಿದರು.

ADVERTISEMENT

ಬಿಜೆಪಿ ಮುಖಂಡ ಬಸವರಾಜ ಹಳ್ಳೆ, ಚೇತನ ಕಪ್ಪೆಕೇರಿ, ಸಂದೀಪ ಪಾಟೀಲ, ಸೂರ್ಯಕಾಂತ ಬಿರಾದಾರ, ಜ್ಞಾನೇಶ್ವರ ದೇವಕತೆ, ಶಿವರಾಜ ಅಲ್ಮಾಜೆ, ಅಶೋಕ ಅಲ್ಮಾಜೆ ಹಾಗೂ ಆನಂದ ದ್ಯಾಡೆ, ಸಂತೋಷ ಫುಲಾರಿ, ಪ್ರಕಾಶ ಅಲ್ಮಾಜೆ, ಯಾದವರಾವ ಮೇತ್ರೆ ಹಾಗೂ ಪ್ರಕಾಶ ಬಂಗಾರೆ ಸೇರಿ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.