ADVERTISEMENT

ಹುಲಸೂರ | ಕಬ್ಬಿನ ಗದ್ದೆಗೆ ಬೆಂಕಿ: ₹3 ಲಕ್ಷ ನಷ್ಟ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 15:39 IST
Last Updated 13 ಜನವರಿ 2024, 15:39 IST
ಹುಲಸೂರ ತಾಲ್ಲೂಕಿನ ಸಮೀಪದ ಕೆಸರ ಜವಳಗಾ ಗ್ರಾಮದ ಲೀಲಾವತಿ ಸುಧಾಕರ ಕುಲಕರ್ಣಿ ಎಂಬುವವರಿಗೆ ಜಮೀನಿನಲ್ಲಿ ಕಬ್ಬು ಬೆಂಕಿಗೆ ಆಹುತಿ ಆಗಿರುವುದು
ಹುಲಸೂರ ತಾಲ್ಲೂಕಿನ ಸಮೀಪದ ಕೆಸರ ಜವಳಗಾ ಗ್ರಾಮದ ಲೀಲಾವತಿ ಸುಧಾಕರ ಕುಲಕರ್ಣಿ ಎಂಬುವವರಿಗೆ ಜಮೀನಿನಲ್ಲಿ ಕಬ್ಬು ಬೆಂಕಿಗೆ ಆಹುತಿ ಆಗಿರುವುದು    

ಹುಲಸೂರ: ಕಿಡಿಗೇಡಿಗಳಿಂದ ತಾಲ್ಲೂಕಿನ ಸಮೀಪದ ಕೆಸರ ಜವಳಗಾ ಗ್ರಾಮದ ಲೀಲಾವತಿ ಸುಧಾಕರ ಕುಲಕರ್ಣಿ ಎಂಬುವವರಿಗೆ ಸೇರಿದ 4.20 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆಯಲ್ಲಿ 2.20 ಎಕರೆ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ, ಅಪಾರ ನಷ್ಟವಾಗಿದೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ಗ್ರಾಮಸ್ಥರು ಸ್ವತಃ ಬೆಂಕಿ ನಂದಿಸಲು ಪ್ರಯತ್ನಿಸಿದರು. ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದರು. ಅಗ್ನಿ ಶಾಮಕ ದಳದ ಸಿಬ್ಬಂದಿ ಬರುವಷ್ಟರಲ್ಲಿ ಅರ್ಧದಷ್ಟು ಕಬ್ಬಿನ ಗದ್ದೆ ಬೆಂಕಿಗೆ ಆಹುತಿಯಾಗಿತ್ತು.

ಸರ್ವೇ ನಂಬರ್‌ 41/2A ಜಮೀನಿನಲ್ಲಿ ಐದಾರು ಅಡಿಗಳಷ್ಟು ಎತ್ತರಕ್ಕೆ ಕಬ್ಬು ಬೆಳೆದಿತ್ತು. ಆದರೆ, ಶನಿವಾರ ಕಿಡಿಗೇಡಿಗಳಿಂದ ಸಂಪೂರ್ಣ ಸುಟ್ಟು ಹೋಗಿದ್ದು, ₹3 ಲಕ್ಷ ನಷ್ಟ ಉಂಟಾಗಿದೆ. ‘ಸರ್ಕಾರ ಪರಿಹಾರ ನೀಡುವುದರ ಜೊತೆ ಬೆಳೆಗೆ ಬೆಂಕಿ ಇಟ್ಟಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ರಾಘವೇಂದ್ರ ಕುಲಕರ್ಣಿ ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.