ADVERTISEMENT

ಭಾಲ್ಕಿ: ಜಿಯೊ ಟೆಕ್ನಾಲಜಿಯಲ್ಲಿ ಶರತರಾಜ್‌ಗೆ ಪ್ರಥಮ ರ್‍ಯಾಂಕ್

ಸತತ ನಾಲ್ಕನೇ ವರ್ಷ ಬಿಕೆಐಟಿ ಕಾಲೇಜಿಗೆ ರ್‍ಯಾಂಕ್ ಗರಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 7:51 IST
Last Updated 1 ಏಪ್ರಿಲ್ 2021, 7:51 IST
ಅರುಣ
ಅರುಣ   

ಭಾಲ್ಕಿ: ಇಲ್ಲಿಯ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯದ 4 ವಿದ್ಯಾರ್ಥಿಗಳು 2020-21ನೇ ಸಾಲಿಗೆ ನಡೆದ ಪರೀಕ್ಷೆಯಲ್ಲಿ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯಕ್ಕೆ ರ್‍ಯಾಂಕ್ ಪಡೆದು ರಾಜ್ಯದ ಗಮನ ಸೆಳೆದಿದ್ದಾರೆ.

ಜಿಯೊ ಟೆಕ್ನಾಲಜಿ ಸ್ನಾತಕೋತ್ತರ ವಿಭಾಗದಲ್ಲಿ ಶರತರಾಜ್ 9.64 ಸಿಜಿಪಿಎ ಪಡೆದು ಪ್ರಥಮ ರ್‍ಯಾಂಕ್, ಸಂಗಮೇಶ 9.64 ಸಿಜಿಪಿಎ ಪಡೆದು ದ್ವಿತೀಯ ರ್‍ಯಾಂಕ್ ಹಾಗೂ ಎಂಜಿನಿಯರಿಂಗ್ ಪದವಿಯ ಕೆಮಿಕಲ್ ವಿಭಾಗದಲ್ಲಿ ಇರ್ಫಾನ್ ಎಂಟನೇಯ, ಅರುಣ ಹತ್ತನೇ ರ್‍ಯಾಂಕ್ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಪ್ರಾಚಾರ್ಯ ನಾಗಶೆಟ್ಟೆಪ್ಪಾ ಬಿರಾದಾರ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಈಶ್ವರ ಖಂಡ್ರೆ, ಸಿವಿಲ್ ವಿಭಾಗದ ಮುಖ್ಯಸ್ಥ ಪ್ರೊ.ಎ.ಪಾಂಡುರಂಗ, ಕೆಮಿಕಲ್ ವಿಭಾಗದ ಮುಖ್ಯಸ್ಥ ಡಾ.ಎಂ.ಎ.ದೇವಣಿ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.