ADVERTISEMENT

ಜಾನಪದ ಉತ್ಸವ ಕಾರ್ಯಕ್ರಮ ಇಂದು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 13:24 IST
Last Updated 21 ಆಗಸ್ಟ್ 2021, 13:24 IST

ಬೀದರ್: ತಡಪಳ್ಳಿಯ ಚಿಗುರು ಸಾಮಾಜಿಕ ಹಾಗೂ ಸಾಂಸ್ಕೃತಿಕಟ್ರಸ್ಟ್ ವತಿಯಿಂದ ನಗರದ ಮಯೂರ ಬರಿದ್‍ಶಾಹಿ ಹೊಟೇಲ್‍ನಲ್ಲಿ ಭಾನುವಾರ (ಆ.22) ಮಧ್ಯಾಹ್ನ 12ಕ್ಕೆ ಅಣ್ಣಾಭಾವು ಸಾಠೆ ಅವರ 101ನೇ ಜಯಂತ್ಯುತ್ಸವ ನಿಮಿತ್ತ ವಿಚಾರ ಸಂಕಿರಣ ಹಾಗೂ ಜನಪದ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ಜೆಸ್ಕಾಂ ಬೀದರ್ ಕಚೇರಿಯ ಲೆಕ್ಕಾಧಿಕಾರಿ ಸುಮಂತ ಕಟ್ಟಿಮನಿ ಉದ್ಘಾಟಿಸುವರು. ಟ್ರಸ್ಟ್ ಅಧ್ಯಕ್ಷ ಶಿವರಾಜ ತಡಪಳ್ಳಿ ಅಧ್ಯಕ್ಷತೆ ವಹಿಸುವರು. ಚಿಂತಕ ರಮೇಶ ಕಾನಟಕರ್ ವಿಶೇಷ ಉಪನ್ಯಾಸ ನೀಡುವರು.

ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶರತಕುಮಾರ ಅಭಿಮಾನ, ಅಣ್ಣಾಭಾವು ಸಾಠೆ ಲೋಕಮಂಚ ಟ್ರಸ್ಟ್ ಅಧ್ಯಕ್ಷ ಎಂ.ಎಸ್. ಮನೋಹರ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಜಾನಪದ ಕಲಾವಿದ ಶಂಕರ ಚೊಂಡಿ, ಮಹಾಮಾನವ ಟ್ರಸ್ಟ್ ಕಾರ್ಯದರ್ಶಿ ಅರುಣ ಪಟೇಲ್, ಬುದ್ಧ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್, ಪಿಡಿಒ ಮನೋಹರ ಹಲಗೆ, ಗ್ರಾಮ ಪಂಚಾಯಿತಿ ಸದಸ್ಯ ಸುಧಾಕರ ವರ್ಮಾ, ಜೆಡಿಎಸ್ ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಭಿ ಕಾಳೆ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುಭಾಷ್ ಸಿರ್ಸಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿಕೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.