ಬೀದರ್: ನಗರದ ವಾಲಿಶ್ರೀ ಆಸ್ಪತ್ರೆ ವತಿಯಿಂದ ರಾಜ್ಯೋತ್ಸವದ ಅಂಗವಾಗಿ ನಾಲ್ಕು ಆಂಬುಲೆನ್ಸ್‌ಗಳಿಗೆ ಚಾಲನೆ ನೀಡಲಾಯಿತು.
ನ್ಯೂ ಟೌನ್ ಪೊಲೀಸ್ ಠಾಣೆಯ ಪಿ.ಎಸ್.ಐ. ಸಂತೋಷ ತಟ್ಟೆಪಲ್ಲಿ ಅವರು ಸಾರ್ವಜನಿಕರಿಗೆ ಉಚಿತ ಸೇವೆ ಒದಗಿಸಲಿರುವ ಆಂಬುಲೆನ್ಸ್‌ಗಳಿಗೆ ಚಾಲನೆ ನೀಡಿದರು.
ವಾಲಿಶ್ರೀ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ರಾಜಶೇಖರ ಸೇಡಂಕರ್ ಮಾತನಾಡಿ, ‘ನಗರದ ನಾಲ್ಕು ದಿಕ್ಕಿನಿಂದ ರೋಗಿಗಳನ್ನು ಆಸ್ಪತ್ರೆಗೆ ಕರೆ ತರಲು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ತರ್ತು ಸಂದರ್ಭದಲ್ಲಿ ತಕ್ಷಣ 9379124050ಗೆ ಸಂಪರ್ಕ ಮಾಡಬೇಕು’ ಎಂದು ಹೇಳಿದರು.
ವಾಲಿಶ್ರೀ ಆಸ್ಪತ್ರೆಯ ಅಧ್ಯಕ್ಷ ರಜನೀಶ ವಾಲಿ, ಡಾ.ವಿ.ವಿ.ನಾಗರಾಜ, ಡಾ. ಪ್ರಸನ್ನ ರೇಷ್ಮೆ, ಡಾ.ರೋಹಿತ್, ಡಾ.ಪ್ರೀತಿ, ಡಾ.ಖಾಜಾ ಮೈನೋದ್ದಿನ್, ಡಾ.ಲಾವಣ್ಯ, ಡಾ.ವೈಜಿನಾಥ ಮದನಾ, ಆದೀಶ್ ವಾಲಿ, ಸಂಜಯಕುಮಾರ ಮಹಾಗಾಂವ, ಶಂಕರ ಕೆಂಚಾ ಹಾಗೂ ಆಸ್ಪತ್ರೆಯ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.