
ಔರಾದ್: ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇರಿ ವಿದ್ಯುತ್ ಗ್ರಾಹಕರಿಗೆ ಉತ್ತಮ ಸೇವೆ ನಿಡಬೇಕಾಗಿದೆ ಎಂದು ಜೆಸ್ಕಾಂ ಅಧೀಕ್ಷಕ ಎಂಜಿನಿಯರ್ ವೀರಭದ್ರಪ್ಪ ಸಾಲಿಮನಿ ಹೇಳಿದರು.
ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯ ಉಪಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಒಳ್ಳೆ ಕೆಲಸ ಮಾಡಿದರೆ ಜನ ಗುರುತಿಸುತ್ತಾರೆ. ಹೀಗಾಗಿ ಗ್ರಾಹಕರಿಗೆ ಉತ್ತಮ ಸೇವೆ ನೀಡಿದರೆ ಇಲಾಖೆಗೂ, ತಮಗೂ ಒಳ್ಳೆ ಹೆಸರು ಬರುತ್ತದೆ’ ಎಂದು ತಿಳಿಸಿದರು.
ಮುಖಂಡ ಕಾಶಿನಾಥ ಬೆಲ್ದಾಳೆ ಮಾತನಾಡಿ, ‘ಗುತ್ತಿಗೆದಾರರಿಗೆ ಸರ್ಕಾರದಿಂದ ವೇತನ ಸಿಗುವುದಿಲ್ಲ. ಹೀಗಾಗಿ ಅಧಿಕಾರಿಗಳು ಗುತ್ತಿಗೆದಾರರಿಗೆ ಕೆಲಸ ತ್ವರಿತಗತಿಯಲ್ಲಿ ಮಾಡಿಕೊಡಬೇಕು’ ಎಂದರು.
ಸನ್ಮಾನ ಸ್ವೀಕರಿಸಿದ ವೀರಶೆಟ್ಟಿ ಖ್ಯಾಮಾ ₹ 1 ಲಕ್ಷದಿಂದ ₹ 5 ಲಕ್ಷದ ವರೆಗೆ ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ನಿಡಲು ಸರ್ಕಾರದ ಆದೇಶವಾಗಿದೆ. ಅದರಂತೆ ಅಧಿಕಾರಿಗಳು ಎಲ್ಲ ಗುತ್ತಿಗೆದಾರರಿಗೂ ಕೆಲಸ ಕೊಡಬೇಕು ಎಂದು ಹೇಳಿದರು.
ಜೆಸ್ಕಾಂ ಎಇಇ ರವಿ ಕಾರಬಾರಿ, ಗುಂಡಪ್ಪ ಕಂಟೆ, ಸೂರ್ಯಕಾಂತ ಬೊಗಾರ, ಮಲ್ಲಿಕಾರ್ಜುನ ಶೆಟಕಾರ್, ಸುಮಂತ ಕಟ್ಟಿಮನಿ, ಪುಂಡಲಿಕ ಗೋಖಲೆ, ರಿಷಿಕೇಶ, ಜಗದೀಶ ಭಂಡೆ, ಖಾಜಾ ಮೈನೊದ್ದಿನ್, ದಿಗಂಬರ್, ವಿಲ್ಸನ್ ಜೋಜನೆಕರ್, ರಾಘವೇಂದ್ರ ಕುಲಕರ್ಣಿ ಮತ್ತಿತರರು ಇದ್ದರು. ಅನೀಲ ಜಿರೋಬೆ ಸ್ವಾಗತಿಸಿದರು. ಮಹೇಶ ಘಾಳೆ ನಿರೂಪಿಸಿದರು. ಸುಬಾಷ ಸಾವಳೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.