ADVERTISEMENT

ಬೀದರ್‌ | ಪಶು ವಿ.ವಿ ಘಟಿಕೋತ್ಸವ: ಚಿನ್ನದ ಪದಕಗಳ ತೂಕ ಇಳಿಕೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 20:40 IST
Last Updated 27 ಫೆಬ್ರುವರಿ 2026, 20:40 IST
   

ಬೀದರ್‌: ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಭಾರಿ ಹೆಚ್ಚಳ ಆಗಿರುವುದರಿಂದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ ಶುಕ್ರವಾರ ನೀಡಲಾದ ಚಿನ್ನದ ಪದಕಗಳ ಗಾತ್ರ ಮತ್ತು ತೂಕದಲ್ಲಿ ಇಳಿಕೆ ಮಾಡಲಾಗಿದೆ. 

ಪದಕಗಳಲ್ಲಿ ಚಿನ್ನ, ಬೆಳ್ಳಿ ಪ್ರಮಾಣವನ್ನು ತಗ್ಗಿಸಲಾಗಿದೆ. ಪ್ರತಿ ಪದಕದ ತೂಕವನ್ನು 20 ಗ್ರಾಂನಿಂದ 17 ಗ್ರಾಂಗೆ ಇಳಿಸಿದ್ದು, ಪದಕದ ಗಾತ್ರವನ್ನು ಹಿಂದೆ ಇದ್ದ 2 ಎಂಎಂನಿಂದ 1.775 ಎಂಎಂ ಇಳಿಸಲಾಗಿದೆ.

ಈ ಸಲ 81 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗಿದೆ. ಇದರಲ್ಲಿ 21 ವಿಶ್ವವಿದ್ಯಾಲಯದ ಹಾಗೂ 60 ಪ್ರಾಯೋಜಿತ ಚಿನ್ನದ ಪದಕಗಳು ಸೇರಿವೆ. ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳು ಹಾಗೂ ಪ್ರಮಾಣ ಪತ್ರ ವಿತರಿಸಿದರು.

ADVERTISEMENT

‘ಚಿನ್ನ, ಬೆಳ್ಳಿ ದರ ಹೆಚ್ಚಾಗಿರುವ ಕಾರಣ ಪ್ರಾಯೋಜಕತ್ವದ ಚಿನ್ನದ ಪದಕಗಳ ತೂಕ, ಗಾತ್ರದಲ್ಲಿ ಸ್ವಲ್ಪ ಇಳಿಕೆ ಮಾಡಲಾಗಿದೆ. ವಿ.ವಿ ಕೊಡುವ ಪದಕಗಳಲ್ಲಿ ಬದಲಾವಣೆ ಮಾಡಿಲ್ಲ’ ಎಂದು ಕುಲಪತಿ ಪ್ರೊ. ಕೆ.ಸಿ.ವೀರಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.