ಬಸವಕಲ್ಯಾಣ: ನಾರಾಯಣಪುರ ಗ್ರಾಮದ ಒಂದನೇ ವಾರ್ಡ್‌ನಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಅರ್ಜುನಸಿಂಗ್ ಅವರು 20 ದಿನಗಳಿಂದ ಉಚಿತವಾಗಿಟ್ಯಾಂಕರ್ ನೀರು ಪೂರೈಸುತ್ತಿದ್ದಾರೆ.
ನಾರಾಯಣಪುರ ದೊಡ್ಡ ಗ್ರಾಮ. ಈ ವರ್ಷ ಮಳೆ ಕೊರತೆ ಕಾರಣ ಇಲ್ಲಿನ ಜಲಮೂಲಗಳು ಬರಿದಾಗಿವೆ. ಒಂದನೇ ವಾರ್ಡ್‌ನಲ್ಲಿ 10 ಕೊಳವೆ ಬಾವಿಗಳಿವೆ. ಅವುಗಳಲ್ಲಿ ಈಗಾಗಲೇ ಅಂತರ್ಜಲ ಪಾತಾಳ ಕಂಡಿದೆ. ಸಮರ್ಪಕವಾಗಿ ನೀರು ಬರುತ್ತಿಲ್ಲ. ವಾರ್ಡ್ ನಿವಾಸಿಗಳು ಪರದಾಡುವ ಪರಿಸ್ಥಿತಿ ಇತ್ತು. ಅದನ್ನು ಮನಗೊಂಡ ಅರ್ಜುನ ಸಿಂಗ್ ನೀರಿನ ವ್ಯವಸ್ಥೆ ಮಾಡಿದ್ದಾರೆ.
‘ಸಂಕಟ ಕಾಲದಲ್ಲಿ ಉಚಿತವಾಗಿ ನೀರು ಪೂರೈಸಿ ಅರ್ಜುನಸಿಂಗ್ ಉತ್ತಮ ಕಾರ್ಯ ಮಾಡಿದ್ದಾರೆ’ ಎಂದು ಗ್ರಾಮದ ಪ್ರಮುಖರಾದ ಭೀಮರೆಡ್ಡಿ ಮತ್ತು ಮಲ್ಲಿಕಾರ್ಜುನ ಅಡಕಿಲೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಟ್ಯಾಂಕರ್ ನೀರು ಪೂರೈಸಿದ್ದರಿಂದ ಬಿಸಿಲಿನಲ್ಲಿ ದೂರದ ಹೊಲಗಳಿಗೆ ನೀರು ತರುವುದಕ್ಕೆ ಹೋಗುವುದು ತಪ್ಪಿತು’ ಎಂದು ಹಿರಿಯರಾದ ಶಾಂತಾಬಾಯಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.