ಹುಮನಾಬಾದ್: ‘ವ್ಯಾಸ ಮಹರ್ಷಿಗಳ ಜನ್ಮದಿನವೇ ಗುರು ಪೂರ್ಣಿಮೆ’ ಎಂದು ಇಲ್ಲಿನ ಹಿರೇಮಠದ ರೇಣುಕ ಗಂಗಾಧರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಯಲಾಲ್ ಶಿಕ್ಷಣ ದತ್ತಿ ಎಸ್.ಬಿ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ, ಅವರು ಆಶೀರ್ವಚನ ನೀಡಿದರು.
‘ಗುರುವಿನ ಮಹತ್ವ ಪರಿಚಯಿಸುವ ಏಕೈಕ ಉದ್ದೇಶದಿಂದ ಪ್ರತಿ ವರ್ಷ ಆಷಾಢ ಮಾಸದಲ್ಲಿ ಗುರು ಪೂರ್ಣಿಮೆ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸುವ ಪರಂಪರೆ ನಡೆದುಕೊಂಡು ಬಂದಿದೆ’ ಎಂದು ಗಂಗಾಧರ ಸ್ವಾಮೀಜಿ ನುಡಿದರು.
ಆದರ್ಶ ಹಾಗೂ ನಿವೃತ್ತ ಶಿಕ್ಷಕರಾದ ಬಂಡೆಪ್ಪ ಎಸ್.ಖೂಬಾ ಮಾತನಾಡಿ, ಶಿಕ್ಷಕರನ್ನು ಗೌರವಿಸುವ ವ್ಯಕ್ತಿಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂಬ ಆತಂಕದ ಮಧ್ಯದಲ್ಲೂ ಯಲಾಲ್ ವಿದ್ಯಾರ್ಥಿಗಳು ಅಕ್ಷರ ಕಲಿಸಿದ ಗುರುಗಳನ್ನು ಸನ್ಮಾನಿಸಿ, ಗೌರವಿಸುತ್ತಿರುವುದು ಆರೋಗ್ಯಪೂರ್ಣ ಬೆಳವಣಿಗೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಗುರುವನ್ನು ಗೌರವಿಸದಾತನಿಗೆ ಭವಿಷ್ಯ ಇಲ್ಲ ಎಂದರು.
ನಿವೃತ್ತ ಶಿಕ್ಷಕರಾದ ವಿಶ್ವನಾಥ ಶೆಳ್ಳಗಿ, ಬಾಬುರಾವ್ ಜನ್ನಾ ಮಾತನಾಡಿದರು. ಸಿಆರ್‌ಪಿ ಪ್ರಕಾಶ ಬೊಂಬಳಗಿ, ಮಹಾವಿದ್ಯಾಲಯ ಪ್ರಾಚಾರ್ಯೆ ಶಿಲ್ಪಾ ಶೇರಿಕಾರ ಮಾತನಾಡಿದರು. ಶಿಕ್ಷಣ ದತ್ತಿ ಮುಖ್ಯ ದತ್ತಿಗಳಾದ ನಿವೃತ್ತ ಶಿಕ್ಷಕ ನಾಗಶಟ್ಟಿ ಯಲಾಲ್ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಕಾರ್ಯದರ್ಶಿ ಮೀನಾಕ್ಷಿ ಯಡವೆ, ಉಪಪ್ರಾಚಾರ್ಯ ಆನಂದ ಚಾಕೂರೆ, ಪ್ರಾಧ್ಯಾಪಕರಾದ ಸಂಗೀತಾ ಪೋಚಂಪಳ್ಳಿ, ಗೌರಮ್ಮ ಪಂಚಮಠ್, ಅಂಬಿಕಾ ಬಿರಾದಾರ್, ಮಮತಾ, ಸಂಗೀತಾ ಹುಪಳೆ, ಸುಜಾತಾ ಸಿಂಗ್, ಭಾಗ್ಯಶ್ರೀ, ಶೋಭಾ ಠಾಕೂರ್, ಅನೀಲಕುಮಾರ ಲದ್ದಿ, ತುಕಾರಾಮ ಬೈನೋರ್, ರುಕ್ಸಾನಾ ಇದ್ದರು.
ಪ್ರೀತಿ ಯಲಾಲ್ ಪ್ರಾರ್ಥಿಸಿದರು. ಸಂಸ್ಥೆ ನಿರ್ದೇಶಕ ಪ್ರಜ್ವಲ್ ಯಲಾಲ್ ಸ್ವಾಗತಿಸಿದರು. ಬಸವೇಶ್ವರ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಶಾಂತವೀರ ಯಲಾಲ್ ಪ್ರಾಸ್ತಾವಿಕ ಮಾತನಾಡಿದರು. ಗಣೇಶಸಿಂಗ್ ತಿವಾರಿ ನಿರೂಪಿಸಿದರು. ಸಾಯಿಪ್ರಸಾದ್ ಯಲಾಲ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.