ADVERTISEMENT

ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 5:00 IST
Last Updated 23 ಡಿಸೆಂಬರ್ 2025, 5:00 IST
ಕಮಲನಗರ ತಾಲ್ಲೂಕಿನ ಹುಲಸೂರ(ಕೆ) ಗ್ರಾಮದ ಛತ್ರಪತಿ ಶಿವಾಜಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನದಲ್ಲಿ ಪಾಲ್ಗೊಂಡಿದ್ದ ಹಳೆಯ ವಿದ್ಯಾರ್ಥಿಗಳು
ಕಮಲನಗರ ತಾಲ್ಲೂಕಿನ ಹುಲಸೂರ(ಕೆ) ಗ್ರಾಮದ ಛತ್ರಪತಿ ಶಿವಾಜಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನದಲ್ಲಿ ಪಾಲ್ಗೊಂಡಿದ್ದ ಹಳೆಯ ವಿದ್ಯಾರ್ಥಿಗಳು   

ಕಮಲನಗರ: ತಾಲ್ಲೂಕಿನ ಹುಲಸೂರ(ಕೆ) ಗ್ರಾಮದ ಛತ್ರಪತಿ ಶಿವಾಜಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹಳೆ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಿತು. 2004-05ನೇ ಸಾಲಿನ ಛತ್ರಪತಿ ಶಿವಾಜಿ ಪ್ರೌಢಶಾಲೆಯ 10ನೇ ಹಳೆ ವಿದ್ಯಾರ್ಥಿಗಳು ಎರಡು ದಶಕಗಳ ನಂತರ ಒಂದೆಡೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ನಿವೃತ್ತ ಶಿಕ್ಷಕ ಗೋವಿಂದರಾವ ಶೇಡೋಳೆ ಮಾತನಾಡಿ, ‘ಗುರು-ಶಿಷ್ಯರ ಸಂಬಂಧ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಪವಿತ್ರ ಬಂಧವಾಗಿದೆ. ಇದು ಜ್ಞಾನ, ಮಾರ್ಗದರ್ಶನ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಪೂರಕ’ ಎಂದು ಹೇಳಿದರು.

ಮುಖ್ಯಶಿಕ್ಷಕ ಶ್ಯಾಮಕಾಂತ ಮಾತನಾಡಿ, ‘20 ವರ್ಷಗಳ ಹಿಂದೆ ಕಲಿತ ವಿದ್ಯಾರ್ಥಿಗಳು ಇಂದು ಒಂದೆಡೆ ಸೇರಿ, ಅಭೂತಪೂರ್ವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ ಪಡೆದು ಉನ್ನತ ಸ್ಥಾನಕ್ಕೇರಬೇಕು’ ಎಂದು ಹೇಳಿದರು.

ADVERTISEMENT

ಯೋಧ ದತ್ತು ದೇಶಮುಖ ಮಾತನಾಡಿ, ‘ನಮ್ಮ ಶಿಕ್ಷಕರು ಕೇವಲ ಪಠ್ಯ ಬೋಧಿಸಲಿಲ್ಲ. ಜೀವನದಲ್ಲಿ ಎದುರಾಗಬಹುದಾದ ಕಷ್ಟ ಹೇಗೆ ಎದುರಿಸಬೇಕು ಎಂಬುದನ್ನು ಕಲಿಸಿದರು. ಮಾದರಿಯಾಗಿ ನಮ್ಮ ಬದುಕು ರೂಪಿಸಿದರು’ ಎಂದು ಸ್ಮರಿಸಿದರು.

ಸತೀಶ ಶೆಡೋಳೆ, ಜ್ಞಾನೋಬಾ ಪಾಟೀಲ, ರಾಜಕುಮಾರ ಪಾಟೀಲ, ದಿನೇಶ ಕಾಶಿವಾಲೆ, ಸತೀಶ ಕರಕರೆ, ರಂಜನಾ, ಸುಮಿತ್ರಾ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ವೆಂಕಟರಾವ ಸೂರ್ಯವಂಶಿ, ಗೋವಿಂದರಾವ ಶೆಡೋಳೆ, ಸಿದ್ರಾಮ ಸಿರ, ವಿನೋದ ಕಾಳೆಕರ, ಅಭಂಗರಾವ, ಅಣ್ಣಾರಾವ, ವೆಂಕಟರಾವ, ವೆಂಕಟರಾವ ಪಾಟೀಲ, ವಿಜಯಕುಮಾರ, ಸುಹಾಲ ಬಿರಾದಾರ, ಪ್ರಭಾವತಿ, ವಿಶ್ವ ಮಾನೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.