ಹುಲಸೂರ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಭಾನುವಾರ ಮಳೆ ಜೋರಾಗಿ ಸುರಿದಿದ್ದು, ಸಂಜೆ ವರೆಗೆ ಜಿಟಿಜಿಟಿ ಮಳೆ ಮುಂದುವರಿದಿತ್ತು.
ರಭಸದ ಮಳೆಯಿಂದ ಕೆಲವೆಡೆ ಬದುಗಳು ಕೊಚ್ಚಿಕೊಂಡು ಹೋಗಿವೆ. ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ.
ಗೋರಟಾ, ಮುಚಳಂಬ, ತೊಗಲೂರ ಮಿರಕಲ, ಗಡಿಗೌಡಗಾಂವ, ವಾಂಝರಖೇಡ್, ಮೆಹಕರ, ಅಳವಾಯಿ, ಅಟ್ಟರಗಾ, ಹಲಸಿ ತುಗಾಂವ, ಬೇಲೂರ ಗ್ರಾಮದಲ್ಲಿ ಜೋರಾದ ಮಳೆ ಸುರಿದಿದೆ.
‘ಸತತ ಮಳೆಯಿಂದ ರೈತರ ಬೆಳೆಗಳಿಗೆ ಅನುಕೂಲವಾಗಿದೆ. ಇಲ್ಲಿವರೆಗೆ ಮಳೆಯಿಂದ ಯಾವುದೇ ಅವಘಡ ಸಂಭವಿಸಿಲ್ಲ’ ಎಂದು ತಹಶೀಲ್ದಾರ್ ಶಿವಾನಂದ್ ಮೇತ್ರೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.