ಬೀದರ್: ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಭಾನುವಾರ ಒಂದು ಗಂಟೆಗೂ ಹೆಚ್ಚು ಸಮಯ ಬಿರುಸಿನ ಮಳೆಯಾಗಿದೆ.
ಎರಡ್ಮೂರು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ, ಭಾನುವಾರ ಆರ್ಭಟಿಸಿದೆ. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ತಂಗಾಳಿ ಬೀಸುತ್ತಿತ್ತು. ಮಧ್ಯಾಹ್ನ 3ಗಂಟೆಗೆ ದಟ್ಟ ಕಾರ್ಮೋಡ ಕವಿದು ಬಿರುಸಿನ ವರ್ಷಧಾರೆ ಪ್ರಾರಂಭವಾಗಿದ್ದು, 4.20ರ ನಂತರವೂ ಮುಂದುವರೆದಿದೆ.
ಬಿರುಸಿನ ಮಳೆಗೆ ಪ್ರಮುಖ ರಸ್ತೆಗಳಲ್ಲಿ ನೀರು ಸಂಗ್ರಹಗೊಂಡು ವಾಹನ ಸಂಚಾರ ನಿಧಾನಗೊಂಡಿತು. ಚರಂಡಿಗಳು ಉಕ್ಕಿ ಹರಿದವು. ತಾಲ್ಲೂಕಿನ ಅಮಲಾಪುರ, ಚಿಟ್ಟಾ, ಘೋಡಂಪಳ್ಳಿ, ಗೋರನಳ್ಳಿ, ಗುನ್ನಳ್ಳಿ, ಯದಲಾಪುರ, ಅಯಾಸಪುರ, ಯಾಕತಪೂರ, ಮನ್ನಳ್ಳಿ, ಸಿಂದೋಲ್, ಕಮಠಾಣ, ಬೆಳ್ಳೂರಾ, ಕೊಳಾರ, ಚಿಕ್ಕಪೇಟೆ, ಮರಕಲ್ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.