ADVERTISEMENT

ಅತಿವೃಷ್ಟಿ | ಶೀಘ್ರ ಪರಿಹಾರ ಹಣ ನೀಡಿ: ಕಿಸಾನ್‌ ಮಹಾಸಭಾದಿಂದ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 5:20 IST
Last Updated 8 ನವೆಂಬರ್ 2025, 5:20 IST
ಅತಿವೃಷ್ಟಿಯಿಂದಾದ ಹಾನಿಗೆ ಶೀಘ್ರ ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಬಸವಕಲ್ಯಾಣದಲ್ಲಿ ಶುಕ್ರವಾರ ಅಖಿಲ ಭಾರತ ಕಿಸಾನ ಮಹಸಭಾ ಸದಸ್ಯರು, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು
ಅತಿವೃಷ್ಟಿಯಿಂದಾದ ಹಾನಿಗೆ ಶೀಘ್ರ ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಬಸವಕಲ್ಯಾಣದಲ್ಲಿ ಶುಕ್ರವಾರ ಅಖಿಲ ಭಾರತ ಕಿಸಾನ ಮಹಸಭಾ ಸದಸ್ಯರು, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು   

ಬಸವಕಲ್ಯಾಣ: ಅತಿವೃಷ್ಟಿಯಿಂದಾದ ಹಾನಿಗೆ ಸರ್ಕಾರ ನಿಗದಿಪಡಿಸಿರುವ ಪರಿಹಾರದ ಹಣ ಆಯಾ ರೈತರ ಬ್ಯಾಂಕ್ ಖಾತೆಗಳಿಗೆ ಶೀಘ್ರದಲ್ಲಿ ಜಮೆ ಮಾಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಕಿಸಾನ ಮಹಾಸಭಾ ವತಿಯಿಂದ ಶುಕ್ರವಾರ ತಹಶೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಲಾಗಿದೆ.

ಮಳೆಗಾಲದ ಆರಂಭದಿಂದ ಹೆಚ್ಚಿನ ಮಳೆ ಸುರಿದಿದೆ. ಹೀಗಾಗಿ ಸೋಯಾಬಿನ್, ತೊಗರಿ, ಉದ್ದು, ಹೆಸರು ಬೆಳೆಗಳು ಹಾಳಾಗಿವೆ. ಜಮೀನಿನಲ್ಲಿ ನೀರು ಸಂಗ್ರಹಗೊಳ್ಳುವ ಜೊತೆಗೆ ತಿಳಿ ನೀರು ಒಸರುತ್ತಿದೆ. ಆದ್ದರಿಂದ ಅನೇಕ ಹೊಲಗಳಲ್ಲಿ ಹಿಂಗಾರು ಬಿತ್ತನೆಯೂ ಕಠಿಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಪರಿಹಾರ ಬಿಡುಗಡೆಗೊಳಿಸುವ ಸಂಬಂಧ ಹೇಳಿಕ್ಕೆ ನೀಡಿದ್ದರೂ ಇದುವರೆಗೆ ಹಣ ಬಂದಿಲ್ಲ. ಆದ್ದರಿಂದ ಅನೇಕ ರೈತರು ಹಣ ಬರುತ್ತದೋ ಇಲ್ಲವೋ ಎಂದು ಚಿಂತಾಕ್ರಾಂತರಾಗಿದ್ದಾರೆ ಎಂದಿದ್ದಾರೆ.

ಕಿಸಾನ ಮಹಾಸಭಾ ಅಧ್ಯಕ್ಷ ಸೂರ್ಯಕಾಂತ ಮದಕಟ್ಟಿ ಮನವಿಪತ್ರ ಸಲ್ಲಿಸಿದರು. ಕಾರ್ಯದರ್ಶಿ ರಾಮಯ್ಯ ಮಠಪತಿ, ಇಬ್ರಾಹೀಂಸಾಬ್, ಮಹಿಳಾ ಘಟಕದ ಅಧ್ಯಕ್ಷೆ ಸಿಂಧು ಮಾನೆ, ರವೀಂದ್ರ ನಲಕಟ್ಟಿ, ಮೋತಿರಾಂ ಸೂರ್ಯವಂಶಿ, ನಂದಾಬಾಯಿ ಭಕ್ಷಿ, ಶಿವರಾಜ ಬೊಕ್ಕೆ, ಮೋಹನ ಬಿರಾದಾರ, ಸಾವನಕುಮಾರ, ಮಹಾದೇವ ಕಾಂಬಳೆ, ವಿಶ್ವನಾಥ, ಮಹ್ಮದ್ ಅಂಬೇವಾಲೆ ಮತ್ತಿತರರು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.