ಬೀದರ್: ನಗರದ ಚಿದ್ರಿ ಬುತ್ತಿ ಬಸವಣ್ಣ ಮಂದಿರದಲ್ಲಿ ಭಾನುವಾರ ನಡೆದ ಜಗನ್ನಾಥ ಮತ್ತು ಕಾವ್ಯ ಮಡಿವಾಳ ಅವರ ಮದುವೆ ಸಮಾರಂಭದಲ್ಲಿ ಬಂಧು, ಮಿತ್ರರಿಗೆ ಹೆಲ್ಮೆಟ್ ಹಾಗೂ ಸಸಿಗಳನ್ನು ವಿತರಿಸಲಾಯಿತು.
ಭಾಗ್ಯವಂತಿ ಮೋಟಾರ್ ವಾಹನ ಚಾಲನಾ ತರಬೇತಿ ಶಾಲೆಯಿಂದ ನೂತನ ವಧು–ವರರು ಹಾಗೂ ಮದುವೆಗೆ ಶುಭ ಹಾರೈಸಲು ಬಂದವರಿಗೆ ಹೆಲ್ಮೆಟ್, ಸಸಿಗಳನ್ನು ವಿತರಿಸಿ, ಅದರ ಮಹತ್ವ ತಿಳಿಸಲಾಯಿತು.
ವಾಹನ ಶಾಲೆಯ ಪ್ರಾಚಾರ್ಯ ಶಿವರಾಜ ಜಮಾದಾರ ಖಾಜಾಪುರ ಮಾತನಾಡಿ, ಪ್ರತಿಯೊಬ್ಬರೂ ಜೀವರಕ್ಷಕ ಹೆಲ್ಮೆಟ್‌ಗಳನ್ನು ಉಪಯೋಗಿಸಬೇಕು. ಸಸಿಗಳನ್ನು ಮನೆಗೆ ಕೊಂಡೊಯ್ದು ಸೂಕ್ತ ಸ್ಥಳಗಳಲ್ಲಿ ಹಚ್ಚಿ, ಪೋಷಿಸಬೇಕು. ಮದುವೆ ಸೇರಿದಂತೆ ಇತರೆ ಶುಭ ಸಮಾರಂಭಗಳಲ್ಲಿ ಬೇರೆ ರೀತಿಯ ಕಾಣಿಕೆಗಳನ್ನು ಕೊಡುವುದರ ಬದಲು ಸಸಿ, ಹೆಲ್ಮೆಟ್‌ಗಳನ್ನು ಕೊಡುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕರುಣಾ ಹಣಮಂತ ಮಡಿವಾಳ, ಪತ್ರಕರ್ತ ನಾಗಶೆಟ್ಟಿ ಧರಂಪೂರ, ನಗರಸಭೆ ಸದಸ್ಯ ದಿಗಂಬರ ಮಡಿವಾಳ ಅಲಿಯಂಬರ್, ಗುಂಡಮ್ಮಾ ಮಡಿವಾಳ, ಸಂತೋಷ ಬಿರಾದಾರ, ಶರಣಮ್ಮಾ ರಾಮಣ್ಣಾ, ಸಂಗಮೇಶ ಪವನ್, ಪ್ರವೀಣ, ಸಂತೋಷ ಮಡಿವಾಳ, ಗುಂಡು ಹಳ್ಳಿಖೇಡ್, ನಂದಕುಮಾರ ಮಡಿವಾಳ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.