ಚಿಟಗುಪ್ಪ: ಸಮೀಪದ ಹಣಕುಣಿ ಗ್ರಾಮದಲ್ಲಿ ಕೋವಿಡ್‌ನಿಂದಾಗಿ ಅಮ್ಮನನ್ನು ಕಳೆದುಕೊಂಡು ಅನಾಥರಾಗಿರುವ ಅಶ್ವಿನಿ ಹಾಗೂ ಮಹಾನಂದಾ ಅವರಿಗೆ ಬಿಜೆಪಿ ಮುಖಂಡರು ಸಹಾಯ ಹಸ್ತ ಚಾಚಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ ಭಾನುವಾರದ ಸಂಚಿಕೆಯಲ್ಲಿ ‘ಅವ್ವ ನಿತ್ಯ ಕಣ್ಮುಂದೆ ಬರುತ್ತಿದ್ದಾಳೆ’ ಶೀರ್ಷಿಕೆಯಡಿ ಮಾನವೀಯ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಬಿಜೆಪಿ ಮುಖಂಡ ಡಾ.ಸಿದ್ದು ಪಾಟೀಲ ಮಕ್ಕಳ ಮನೆಗೆ ಭೇಟಿ ನೀಡಿ ಅವರ ಶಿಕ್ಷಣಕ್ಕೆ ₹10 ಸಾವಿರ ನೆರವು ಹಾಗೂ ದಿನಸಿ ಪದಾರ್ಥಗಳನ್ನು ನೀಡಿದ್ದಾರೆ.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಾಭು ಟೈಗರ್, ಗಣ್ಯರಾದ ಗಿರೀಶ್ ತುಂಬಾ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್ ರೆಡ್ಡಿ, ಖಾಜಾಮಿಯ್ಯ, ರುಬಿಟ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.