ADVERTISEMENT

ಹಿಂದೂ ಮಂತ್ರವೇ ವಿಶ್ವಕ್ಕೆ ದಾರಿದೀಪ: ಕಾಜಲ್ ಹಿಂದೂಸ್ತಾನಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 16:11 IST
Last Updated 31 ಆಗಸ್ಟ್ 2024, 16:11 IST
ಭಾಲ್ಕಿಯ ಪುರಭವನದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಸಂಸ್ಥಾಪನ ದಿನಾಚರಣೆಯಲ್ಲಿ ಸಾಮಾಜಿಕ ಕಾರ್ಯಕರ್ತೆ ಕಾಜಲ್ ಹಿಂದೂಸ್ತಾನಿ ಮಾತನಾಡಿದರು
ಭಾಲ್ಕಿಯ ಪುರಭವನದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಸಂಸ್ಥಾಪನ ದಿನಾಚರಣೆಯಲ್ಲಿ ಸಾಮಾಜಿಕ ಕಾರ್ಯಕರ್ತೆ ಕಾಜಲ್ ಹಿಂದೂಸ್ತಾನಿ ಮಾತನಾಡಿದರು   

ಭಾಲ್ಕಿ: ‘ಜಗತ್ತಿಗೆ ಹಿಂದೂ ಮಂತ್ರವೇ ದಾರಿದೀಪವಾಗಿದೆ. ಹಿಂದೂ ಇಲ್ಲದೇ ಜಗದಾಟ ನಡೆಯದು’ ಎಂದು ಸಾಮಾಜಿಕ ಕಾರ್ಯಕರ್ತೆ ಕಾಜಲ್ ಹಿಂದೂಸ್ತಾನಿ ಹೇಳಿದರು.

ಪಟ್ಟಣದ ಪುರಭವನದಲ್ಲಿ ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ, ವಿಶ್ವ ಹಿಂದೂ ಪರಿಷತ್ತಿನ ಸಂಸ್ಥಾಪನಾ ದಿನದ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧರ್ಮ ಸಂಸ್ಥಾಪನಾರ್ಥ ಜನ್ಮ ತಳಿದ ಕೃಷ್ಣನಿಂದ ಧರ್ಮ ಸ್ಥಾಪನೆಯಾಗಿದೆ. ವಿಶ್ವಕ್ಕೆ ಹಿಂದೂ ಧರ್ಮವೇ ಮಾರ್ಗದರ್ಶಿಯಾಗಿದೆ. ಹಿಂದೂ ಮಂತ್ರದಿಂದಲೇ ಜಗತ್ತು ನಡೆಯುತ್ತಿದೆ ಎಂದರು.

ADVERTISEMENT

ಹಲಬರ್ಗಾ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ,‘ಜಗತ್ತಿಗೆ ಶಾಂತಿ ಮಂತ್ರ ಹೇಳುವ ಧರ್ಮ ಯಾವುದಾದರೂ ಇದ್ದರೆ ಅದು ಹಿಂದೂ ಧರ್ಮ’ ಎಂದು ಹೇಳಿದರು.

ಜೈ ಭಾರತ ಮಾತಾ ಸೇವಾ ಸಮಿತಿಯ ಹವಾ ಮಲ್ಲಿನಾಥ ಸ್ವಾಮೀಜಿ ಮಾತನಾಡಿ,‘ಎಲ್ಲರಲ್ಲಿಯೂ ದೇಶ ಪ್ರೇಮ ಬೆಳೆಯಬೇಕಾದರೆ ಹಿಂದೂ ರಾಷ್ಟ್ರದಲ್ಲಿ ಹಿಂದೂಗಳಾಗಿ ಬಾಳಬೇಕು’ ಎಂದರು.

ವಿಶ್ವ ಹಿಂದೂ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಸಾಗರ ಮಾಲಾನಿ, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಪ್ರತಿನಿಧಿ ಜೈಕಿಶ ಬಿಯಾನಿ, ಪ್ರಮುಖರಾದ ಸೋಮನಾಥಪ್ಪ ಅಷ್ಟೂರೆ, ಶುಭಾಂಗಿ ಚನ್ನಬಸವ ಬಳತೆ, ಶಿವಕುಮಾರ ಲೋಖಂಡೆ, ಸಂದೀಪ ತೆಲಗಾಂವಕರ್, ರಾಜಪ್ಪ ಪಾಟೀಲ, ನಾಗಭೂಷಣ ಮಾಮಡಿ, ಬಿಜೆಪಿ ಮುಖಂಡ ಪ್ರಸನ್ನ ಪ್ರಕಾಶ ಖಂಡ್ರೆ, ಶಿವರಾಜ ಗಂದಗೆ, ಚನ್ನಬಸವಣ್ಣ ಬಳತೆ, ಶಾಲಿವಾನ ಕನಕಟ್ಟೆ, ಜೆಡಿಎಸ್ ಮುಖಂಡ ಸಿದ್ರಾಮಪ್ಪ ವಂಕೆ, ಶಿವರಾಜ ಮಲ್ಲೇಶಿ, ರಾಜಕುಮಾರ ತೊಗಲೂರ, ಇಂದ್ರಜೀತ ಪಾಂಚಾಳ, ಸಂಗಮೇಶ ಕಾರಾಮುಂಗೆ, ದೀಪಕ್ ಥಮಕೆ ಹಾಗೂ ಸಚಿನ್ ಜಾಧವ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.