ADVERTISEMENT

ಔರಾದ್: ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ, ಹೋಮ್ ಗಾರ್ಡ್ ಸ್ಥಳದಲ್ಲೇ ಸಾವು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2023, 16:20 IST
Last Updated 30 ಅಕ್ಟೋಬರ್ 2023, 16:20 IST
<div class="paragraphs"><p>ಪಾಂಡುರಂಗ ದೇವಕತೆ</p></div>

ಪಾಂಡುರಂಗ ದೇವಕತೆ

   

ಔರಾದ್ (ಬೀದರ್ ಜಿಲ್ಲೆ): ಪಟ್ಟಣಕ್ಕೆ ಸಮೀಪದ ಬೀದರ್- ಔರಾದ್ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಸೋಮವಾರ ರಾತ್ರಿ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿಯಾಗಿ ಹೋಮ್ ಗಾರ್ಡ್ ಸಾಗರ ಪಾಂಡುರಂಗ ದೇವಕತೆ (32) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೀದರ್ ಕಡೆಯಿಂದ ಔರಾದ್‌ಗೆ ಬರುವಾಗ ಕತ್ತಲ್ಲಲಿ ಟ್ರ್ಯಾಕ್ಟರ್ ಕಾಣದೇ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಎಸ್ಐ ಉಪೇಂದ್ರ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.