ADVERTISEMENT

ಹುಲಸೂರ: ಉತ್ತಮ ಮಳೆ, ಸೇತುವೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 14:21 IST
Last Updated 18 ಆಗಸ್ಟ್ 2024, 14:21 IST
ಭಾನುವಾರ ಸುರಿ ಮಳೆಯಿಂದ ಹುಲಸೂರ ಕೊಂಗಳಿ ಗ್ರಾಮದಿಂದ ಮೆಹಕರ ಗ್ರಾಮಕ್ಕೆ ಕಲ್ಪಿಸುವ ಕಿರು ಸೇತುವೆ ಜಲಾವೃತವಾಗಿರುವುದು
ಭಾನುವಾರ ಸುರಿ ಮಳೆಯಿಂದ ಹುಲಸೂರ ಕೊಂಗಳಿ ಗ್ರಾಮದಿಂದ ಮೆಹಕರ ಗ್ರಾಮಕ್ಕೆ ಕಲ್ಪಿಸುವ ಕಿರು ಸೇತುವೆ ಜಲಾವೃತವಾಗಿರುವುದು   

ಹುಲಸೂರ: ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಭಾನುವಾರ ಮಧ್ಯಾಹ್ನ ಅರ್ಧಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದ್ದು  ಕೊಂಗಳಿ ಗ್ರಾಮದಿಂದ ಮೆಹಕರ ಗ್ರಾಮಕ್ಕೆ ಕಲ್ಪಿಸುವ ಕಿರು ಸೇತುವೆ ರಸ್ತೆ ಜಲಾವೃತವಾಗಿತ್ತು.

ಹುಲಸೂರ ಸಮೀಪದ ಸಾಯಗಾಂವ ಹೋಬಳಿಯ ವಾಂಝರಖೆಡ್, ಮೆಹಕರ, ಅಟ್ಟರಗಾ, ಅಳವಾಯಿ, ಹಲಸಿ ತುಗಾಂವ ಸೇರಿದಂತೆ ಇತರೆಡೆ ಮಧ್ಯಾಹ್ನ ಅರ್ಧ ತಾಸು ಗುಡುಗು ಸಿಡಿಲು ಸಹಿತ ಜೋರಾದ ಮಳೆ ಸುರಿದಿದೆ. ಮೀರಖಲ, ಬೇಲೂರ, ಗಡಿಗೌಡಗಾಂವ ಸೇರಿದಂತೆ ಇತರೆಡೆ ಗ್ರಾಮದಲ್ಲಿ ಜಿಟಿಜಿಟಿ ಮಳೆಯಾಗಿದೆ. 

ಮಳೆಯಿಲ್ಲದೇ ಹಲವು ದಿನಗಳಿಂದ ಕಂಗಾಲಾಗಿದ್ದ ರೈತರು ಭಾನುವಾರ ಸುರಿದ ಉತ್ತಮ ಮಳೆಯಿಂದ ಬೆಳೆಗಳಿಗೆ ಅನುಕೂಲವಾಗಿದೆ ಎಂದು ರೈತರು ತಿಳಿಸಿದ್ದಾರೆ.ವಿದ್ಯುತ್ ಸಮಸ್ಯೆಯಿಂದ ಬೇಸತ್ತಿದ್ದೇವೆ. ವಿದ್ಯುತ್ ಸಮಸ್ಯೆ ಬಗೆಹರಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ADVERTISEMENT

ಕಿರು ಸೇತುವೆ ಎತ್ತರಿಸಲು ಒತ್ತಾಯ: ಹುಲಸೂರ ಸಮೀಪದ ಕೊಂಗಳಿ ಗ್ರಾಮದಿಂದ ಮೆಹಕರ ಗ್ರಾಮಕ್ಕೆ ಕಲ್ಪಿಸುವ ಕಿರು ಸೇತುವೆ ರಸ್ತೆ ಮಳೆಯಿಂದ ಜಲಾವೃತವಾಗಿದೆ. ಸೇತು ತೀರಾ ಕೆಳಹಂತದಲ್ಲಿ ಇರುವುದರಿಂದ ಮಳೆ ಬಂದಾಗೊಮ್ಮೆ ಜಲಾವೃತವಾಗಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಗುತ್ತದೆ. ‌ಅಲ್ಲಿ ಸೇತುವೆ ತುಂಬಾ ವರ್ಷಗಳ ಹಳೆಯದಾಗಿದ್ದು ಕೂಡಲೇ ಸೇತುವೆಯನ್ನು ಎತ್ತರಿಸಬೇಕು ಎಂದು ಮುಖಂಡರಾದ ಅಶೋಕ ಪಾಟೀಲ, ಪ್ರಶಾಂತ ಮೋರೆ ಸೇರಿ ಹಲವರು ಮನವಿ ಮಾಡಿದ್ದಾರೆ.

ಫೊಟೋ ಶೀರ್ಷಿಕೆ: ಕೊಂಗಳಿ ಗ್ರಾಮದಿಂದ ಮೆಹಕರ ಗ್ರಾಮಕ್ಕೆ ಕಲ್ಪಿಸುವ ಕಿರು ಸೇತುವೆ ರಸ್ತೆ ಜಲಾವೃತವಾಗಿದ್ದು ಕೆಲಕಾಲ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.