ಹುಮನಾಬಾದ್: ‘ವಿಜ್ಞಾನ ಮತ್ತು ಕಲಾ ವಸ್ತುಪ್ರದರ್ಶನ ಮಕ್ಕಳಲ್ಲಿನ ನಿಜವಾದ ಪ್ರತಿಭೆ ಹೊರತರಲು ಸಹಕಾರಿ ಆಗಿದೆ’ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ಹೇಳಿದರು.
ತಾಲ್ಲೂಕಿನ ಹಳ್ಳಿಖೇಡ್ ಬಿ.ಪಟ್ಟಣದ ಆರ್.ಜೆ. ಹಿಬಾರೆ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ವಿಜ್ಞಾನ ಮತ್ತು ಕಲಾವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
‘ವಿಜ್ಞಾನಕ್ಕೆ ಸಂಬಂಧಿಸಿದ ನೂತನ ಮಾದರಿಗಳನ್ನು ಮಕ್ಕಳು ಮಾಡುವುದರಿಂದ ವೈಜ್ಞಾನಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವಲ್ಲಿ ಯಾವುದೇ ಸಂದೇಹವಿಲ್ಲ’ ಎಂದರು.
ಸಂಸ್ಥೆಯ ಅಧ್ಯಕ್ಷ ನಾಗರಾಜ ಹಿಬಾರೆ ಮಾತನಾಡಿ, ‘ವಸ್ತುಪ್ರದರ್ಶನದಿಂದ ಮಕ್ಕಳಲ್ಲಿನ ನೈಜತೆ, ಕ್ರಿಯಾತ್ಮಕ ಚಟುವಟಿಕೆ, ಸುಪ್ತವಾದ ಪ್ರತಿಭೆ ಅರಳುತ್ತದೆ’ ಎಂದರು.
ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನದಲ್ಲಿ 500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಸ್ತು ಪ್ರದರ್ಶನದಲ್ಲಿ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ರಸಾಯನಶಾಸ್ತ್ರ, ಐತಿಹಾಸಿಕ ಮತ್ತು ಭೌಗೋಳಿಕ ಹಾಗೂ ವೈಜ್ಞಾನಿಕ ಮಾದರಿಗಳು ಇದ್ದವು. ಬೇರೆ ಶಾಲೆಯಿಂದ ವಿದ್ಯಾರ್ಥಿಗಳು, ಪಾಲಕರು, ಸಾರ್ವಜನಿಕರು ಆಗಮಿಸಿ ಮಾದರಿಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೇಶವರಾವ ತಳಘಟಕರ್, ರಾಹುಲ ಮಿಶ್ರಾ, ಸಂಸ್ಥೆಯ ಕಾರ್ಯದರ್ಶಿ ರುಚಿತಾ ನಾಗರಾಜ ಹಿಬಾರೆ, ಪುರಸಭೆ ಸದಸ್ಯ ಯುಸುಫ್ ಸೌದಾಗರ್, ಭೀಮರಾವ ನಾಯಕ್ , ಕೆ.ಶಿಲ್ಪಾವತಿ,
ಅಬ್ದುಲ್ ರಜಾಕ್, ಅಶೋಕ ಬಾವಗಿ, ಶಿವರಾಜ ಲಾಡಕರ್, ಸಂತೋಷ ಪಾಟೀಲ, ಚಾಂದ ಖುರೇಶಿ,ಶಾಂತು ಅರಳಿ,ರಮೇಶ ಮಾಳಗೆ, ಸಂದೀಪ್ ತೀರ್ಥಾ, ಚಂದು ಮಾಲೆ, ಆಕಾಶ ಶಿಂಧೆ, ಸೋಮನಾಥ ಜ್ಯಾಂತೆ,ಹಸನ್ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.