ADVERTISEMENT

ದೇಗುಲದ ಹುಂಡಿ ಒಡೆದು ಹಣ ಕಳವು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 6:06 IST
Last Updated 4 ಆಗಸ್ಟ್ 2021, 6:06 IST
ಬೀದರ್‌ನ ಪಾಪನಾಶ ಮಂದಿರದಲ್ಲಿರುವ ಹುಂಡಿ ಒಡೆಯಲಾಗಿದೆ
ಬೀದರ್‌ನ ಪಾಪನಾಶ ಮಂದಿರದಲ್ಲಿರುವ ಹುಂಡಿ ಒಡೆಯಲಾಗಿದೆ   

ಬೀದರ್‌: ಪಾಪನಾಶ ಮಂದಿರದ ಒಳಗಡೆ ಇರುವ ದೇವಸ್ಥಾನದ ಹುಂಡಿ ಒಡೆದು ಕಳ್ಳರು ಮಂಗಳವಾರ ಬೆಳಗಿನ ಜಾವ ಹಣ ದೋಚಿಕೊಂಡು ಹೋಗಿದ್ದಾರೆ.

ಮೂರು ದಿನಗಳ ಹಿಂದೆ ಕಳ್ಳರು ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದ ಕೇಬಲ್‌ ಕಟ್‌ ಮಾಡಿದ್ದಾರೆ. ಸೋಮವಾರ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಅಲ್ಲಿಯೇ ವಾಸ್ತವ್ಯ ಮಾಡಿದ್ದರು. ಮಂಗಳವಾರ ದೇವಸ್ಥಾನದಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ.

ಸಮಯ ಸಾಧಿಸಿ ಕಳ್ಳರು ಹುಂಡಿಗೆ ಹಾಕಿದ ಬೀಗವನ್ನು ಕಲ್ಲಿನಿಂದ ಹೊಡೆದು ಮುರಿದು ನಗದು ದೋಚಿಕೊಂಡು ಹೋಗಿದ್ದಾರೆ.

ಧರ್ಮದತ್ತಿ ಇಲಾಖೆಗೆ ಸೇರಿದ ದೇವಸ್ಥಾನದ ಹುಂಡಿಯನ್ನು ಮೂರು ತಿಂಗಳಿಗೊಮ್ಮೆ ತೆರೆದು ಲೆಕ್ಕ ಮಾಡಿ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತಿದೆ. ಸಾಮಾನ್ಯವಾಗಿ ₹ 2.50 ಲಕ್ಷದಿಂದ ₹ 3 ಲಕ್ಷ ಸಂಗ್ರಹವಾಗಿರುತ್ತದೆ. ಕಳ್ಳರು ಅಂದಾಜು ₹ 3 ಲಕ್ಷ ಕದ್ದೊಯ್ದಿರಬಹುದು ಎಂದು ದೇವಸ್ಥಾನ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ಕಿರಾಣಿ ಅಂಗಡಿ ಕಳ್ಳತನಕ್ಕೆ ಯತ್ನ: ಗುಂಪಾದ ಮುಖ್ಯರಸ್ತೆಯ ಕಾಂಪ್ಲೆಕ್ಸ್‌ನಲ್ಲಿರುವ ಕಿರಣಾ ಅಂಗಡಿಯ ಗೋಡೆ ಹಾಗೂ ಶೆಟರ್‌ನ ಬೀಗ ಒಡೆದು ಕಳ್ಳತನಕ್ಕೆ ಪ್ರಯತ್ನ ನಡೆಸಲಾಗಿದೆ. ದೇವ್‌ ಕಿರಾಣಿ ಅಂಗಡಿ ಮಾಲೀಕ ಆಕಾಶ ರಾಜಕುಮಾರ ಗಾಂಧಿ ಗಂಜ್‌ ಠಾಣೆಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.