ADVERTISEMENT

ಅಕ್ರಮ ಸಾಗಣೆ: 15 ಜಾನುವಾರು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 3:39 IST
Last Updated 22 ಜುಲೈ 2021, 3:39 IST
ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 15 ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು
ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 15 ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು   

ಭಾಲ್ಕಿ: ಅಕ್ರಮವಾಗಿ ಕಸಾಯಿಖಾನೆಗೆ ಸಾಗಣೆ ಮಾಡುತ್ತಿದ್ದ ಸುಮಾರು ₹5.34 ಲಕ್ಷ ಮೌಲ್ಯದ 15 ಜಾನುವಾರುಗಳನ್ನು ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ರಕ್ಷಣೆ ಮಾಡಿದ್ದಾರೆ.

ಜಾನುವಾರು ಸಾಗಿಸುತ್ತಿದ್ದ ಹಣಮಂತ ಶರಣಪ್ಪ ಬಾವುಗೆ ಮತ್ತು ಇಸ್ಮಾಯಿಲ್ ವಲಿಸಾಬ್ ಖುರೇಸಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಗೂಡ್ಸ್ ಟೆಂಪೊ ಜಪ್ತಿ ಮಾಡಿಕೊಳ್ಳಲಾಗಿದೆ.

‘ಮಂಗಳವಾರ ರಾತ್ರಿ ಹುಲಸೂರ ಕಡೆಯಿಂದ ಭಾತಂಬ್ರಾ ಕಡೆಗೆ ಗೂಡ್ಸ್ ವಾಹನದಲ್ಲಿ 15 ಜಾನುವಾರುಗಳನ್ನು ಸಾಗಾಣಿಕೆ ಮಾಡಲಾಗುತ್ತಿತ್ತು. ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದ ಪಿಎಸ್‍ಐ ಮಹೇಂದ್ರಕುಮಾರ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ತಂಡ ರಚಿಸಿ, ಭಾತಂಬ್ರಾ ರಸ್ತೆಯ ಮದರಸಾ ದರ್ಗಾದ ಸಮೀಪ ಜಾನುವಾರುಗಳನ್ನು ರಕ್ಷಿಸಲಾಗಿದೆ. ಪಶು ವೈದ್ಯಾಧಿಕಾರಿ ಡಾ.ಸತೀಶ ಭೋಸ್ಲೆ, ಡಾ.ರಾವಸಾಬ ಪಾಟೀಲ ಪರೀಕ್ಷಿಸಿದ ನಂತರ ಅವುಗ
ಳನ್ನು ಕರಡ್ಯಾಳ ಗೋಶಾಲೆಗೆ ಕಳುಹಿಸಲಾ
ಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಗ್ರಾಮದ ಯುವಕರಾದ ಸಂಗಮೇಶ ವಾಡೆ, ವಿಶ್ವ ಹೂಗಾರ, ಮಲ್ಲು ಸೋಲಾಪೂರೆ, ಮಹೇಶ ಭಂಡೆ, ಸಚಿನ್ ಅಹ್ಮದಾಬಾದೆ, ಸಚಿನ್ ಮೇಳಕುಂದೆ ಪೊಲೀಸರಿಗೆ ಸಹಕಾರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.