ADVERTISEMENT

NEKRTC ಎಲ್ಲ ಬಸ್‌ಗಳ ಮೇಲೆ ‘ಕಲ್ಯಾಣ ಕರ್ನಾಟಕ‘ ಫಲಕ ಅಳವಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 14:14 IST
Last Updated 4 ಅಕ್ಟೋಬರ್ 2021, 14:14 IST
ಬೀದರ್‌ನಲ್ಲಿ ಸೋಮವಾರ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಅನಂತರೆಡ್ಡಿ ಮಿರ್ಜಾಪೂರ ಅವರು ಸಾರಿಗೆ ನಿಗಮದ ಅಧಿಕಾರಿಗೆ ಮನವಿಪತ್ರ ಸಲ್ಲಿಸಿದರು. ಡಾ.ಸಿ.ಆನಂದರಾವ್‌ ಇದ್ದಾರೆ
ಬೀದರ್‌ನಲ್ಲಿ ಸೋಮವಾರ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಅನಂತರೆಡ್ಡಿ ಮಿರ್ಜಾಪೂರ ಅವರು ಸಾರಿಗೆ ನಿಗಮದ ಅಧಿಕಾರಿಗೆ ಮನವಿಪತ್ರ ಸಲ್ಲಿಸಿದರು. ಡಾ.ಸಿ.ಆನಂದರಾವ್‌ ಇದ್ದಾರೆ   

ಬೀದರ್‌: ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಎಲ್ಲ ಬಸ್‌ಗಳ ಮೇಲೆ ಕಲ್ಯಾಣ ಕರ್ನಾಟಕ ಎಂದು ಬರೆಸಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಒತ್ತಾಯಿಸಿದೆ.

ಸಮಿತಿ ಅಧ್ಯಕ್ಷ ಅನಂತರೆಡ್ಡಿ. ಬ.ಟಿ ಮಿರ್ಜಾಪೂರ ನೇತೃತ್ವದಲ್ಲಿ ಪ್ರಮುಖರು ನಿಗಮದ ಬೀದರ್‌ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಿದರು.

ಹೈದರಾಬಾದ್‌ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಹಾಗೂ ಈಶಾನ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಎಂದು ಮರು ನಾಮಕರಣ ಮಾಡಲಾಗಿದೆ. ಆದರೆ ಫಲಕಗಳಲ್ಲಿ ಇನ್ನೂ ಹಳೆಯ ಹೆಸರುಗಳೇ ಇವೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಸಂಬಂಧಪಟ್ಟ ಅಧಿಕಾರಿಗಳು ಎರಡು ವಾರಗಳಲ್ಲಿ ಹೆಸರು ಬದಲಿಸಿದ ಫಲಕ ಹಾಕದಿದ್ದರೆ ಪ್ರತಿಭಟನೆ ಮಾಡುವುದು ಅನಿವಾರ್ವವಾಗಲಿದೆ ಎಂದು ಎಚ್ಚರಿಸಿದರು.

ಡಾ.ಸಿ.ಆನಂದರಾವ್‌, ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.