ADVERTISEMENT

ಹುಮನಾಬಾದ್| ಕಾರ್ಖಾನೆ ತ್ಯಾಜ್ಯ ಬೇಕಾಬಿಟ್ಟಿ ವಿಲೇ: ಅಧಿಕಾರಿಗಳ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 6:31 IST
Last Updated 9 ನವೆಂಬರ್ 2025, 6:31 IST
ಗುಂಡು ರೆಡ್ಡಿ
ಗುಂಡು ರೆಡ್ಡಿ   

ಹುಮನಾಬಾದ್: ಪಟ್ಟಣದ ಹೊರವಲಯದಲ್ಲಿರುವ ರಾಸಾಯನಿಕ ಕಾರ್ಖಾನೆಗಳು, ಅಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ ಬೇಕಾಬಿಟ್ಟಿಯಾಗಿ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜಿ.ಪಂ ಮಾಜಿ ಸದಸ್ಯ ಹಾಗೂ ಯುವ ಕ್ರಾಂತಿ ಸಂಘಟನೆ ರಾಜ್ಯಾಧ್ಯಕ್ಷ ಗುಂಡು ರೆಡ್ಡಿ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಮನಾಬಾದ್ ಪಟ್ಟಣದ ರಾಸಾಯನಿಕ ಕಾರ್ಖಾನೆಗಳಿಗೆ ಇಲ್ಲಿಯ ಕೆಲವು ರಾಜಕೀಯ ನಾಯಕರು ಮತ್ತು ಅಧಿಕಾರಿಗಳ ಬೆಂಬಲವಿದೆ. ಹೀಗಾಗಿ ಕಾರ್ಖಾನೆಯವರು ತಮ್ಮ ‌ಮನಬಂದಂತೆ ಎಲ್ಲೆಂದರಲ್ಲಿ ವಿಷಪೂರಿತ ತ್ಯಾಜ್ಯ ವಿಲೇವಾರಿ ಮಾಡಿ, ಹೋಗುತ್ತಿದ್ದಾರೆ’ ಎಂದು ಕಿಡಿಕಾರಿದರು.

ರೈತರಿಗೆ ಬೆಂಬಲ: ಕಬ್ಬಿಗೆ ಉತ್ತಮ ಬೆಲೆ ನೀಡಬೇಕು. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ರೈತ ಸಂಘದ ಮುಖಂಡರು ಹೇಳಿದ್ದಾರೆ. ಪ್ರತಿಭಟನೆಗೆ ಯುವ ಕ್ರಾಂತಿ ಸಂಘಟನೆಯ ಸಂಪೂರ್ಣವಾಗಿ ಬೆಂಬಲ ನೀಡಲಿದೆ ಎಂದರು.

ADVERTISEMENT

ಸಂಗಮೇಶ ಭೂರೆ, ರಾಜು ಹಳ್ಳಿಖೇಡ್ಕರ, ದಯಾನಂದ ಸ್ವಾಮಿ, ಪಪ್ಪುರಾಜ್ ಚತುರೆ, ಮನೋಜಕುಮಾರ ಮಾನೆ, ಗುಂಡು ರೆಡ್ಡಿ ಕನಕಟ್, ಸಚಿನ್ ಮೋಳಕೇರಾ ಸೇರಿದಂತೆ ಇತರರು ಹಾಜರಿದ್ದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.