ಕಮಲನಗರ: ‘ರೈತರು ಸಮಗ್ರ ಕೃಷಿ ಪದ್ಧತಿ ಅನುಸರಿಸಿ ಅಧಿಕ ಇಳುವರಿ ಪಡೆಯಬೇಕು. ಲಾಭದಾಯಕ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬೇಕು’ ಎಂದು ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ ಮಲ್ಲಿಕಾರ್ಜುನ ಮಠ ಸಲಹೆ ನೀಡಿದರು.
ತಾಲ್ಲೂಕಿನ ಮುಧೋಳ(ಬಿ) ಗ್ರಾಮದ ಹಾವಗಿರಾವ ವಟಗೆ ಅವರ ಹೊಲದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತ ಕೂಟ, ಹಿರಿಯರ ಸ್ಮರಣೋತ್ಸವ ಮತ್ತು ಬಸವಜ್ಯೋತಿ ಕಾಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಯುವಜನರು ಸಂಕೋಚ ಪಡದೇ ಕೃಷಿಯತ್ತ ಮುನ್ನುಗ್ಗಬೇಕು. ರೈತರು ತಂತ್ರಜ್ಞಾನ ಅಳವಡಿಸಿಕೊಂಡು ಸಮಗ್ರ ಕೃಷಿ ನೀತಿ ಅನುಸರಿಸಬೇಕು’ ಎಂದರು.
ಬಾಬುರಾವ ಕುಲಾಲ್ ಮಾತನಾಡಿ, ‘ರಾಸಾಯನಿಕ ಗೊಬ್ಬರ ಜತೆಗೆ ಸಾವಯವ ಗೊಬ್ಬರ ಬಳಕೆ ಮಾಡಬೇಕು. ಈ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಬೇಕು. ಕಬ್ಬು, ಪೇರಲೆ, ಪಪ್ಪಾಯಿ, ಬಾಳೆಹಣ್ಣು, ಸಾಗವಾನಿ, ಸೇಬು ಮುಂತಾದ ಬೆಳೆಗಳನ್ನು ಬೆಳೆಯಬೇಕು’ ಎಂದರು.
ನಿವೃತ್ತ ಅಧಿಕಾರಿ ಅಂತೇಶ್ವರ ಶೆಟಕಾರ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಭಾರತ ಸ್ವಾಭಿಮಾನಿ ತಾಲ್ಲೂಕು ಅಧ್ಯಕ್ಷ ಗಣಪತರಾವ ಖೂಬಾ ವಹಿಸಿದ್ದರು.
ವೇದಿಕೆಯಲ್ಲಿ ವಿಶ್ವನಾಥರಾವ ಖೂಬಾ, ನಿವೃತ್ತ ಪ್ರಾಚಾರ್ಯ ಎಸ್.ಎಸ್.ಮೈನಾಳೆ, ನಿವೃತ್ತ ಪ್ರಾಧ್ಯಾಪಕ ಜಗನ್ನಾಥ ಚಿಮ್ಮಾ, ಸಹಾಯಕ ತೋಟಗಾರಿಕೆ ಅಧಿಕಾರಿ ಅಣ್ಣಾರಾವ ಪಾಟೀಲ, ನಾಗಯ್ಯ ಸ್ವಾಮಿ, ಬಾಬುರಾವ ಹಲಬರ್ಗೆ, ಧುಳಪ್ಪ ನಂದನವರೆ, ಭಾನುದಾಸ ಕಾರಬಾರಿ, ಗುರುನಾಥ ವಟಗೆ, ಶಂಕರರಾವ ಉದಗೀರೆ ಇದ್ದರು.
ಹಾವಗಿರಾವ ವಟಗೆ ಸ್ವಾಗತಿಸಿದರು. ಗಜಾನಂದ ವಟಗೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.