ADVERTISEMENT

ಬೀದರ್: ನವೀಕರಿಸಿದ ಅಬಕಾರಿ ಲೈಸನ್ಸ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 15:14 IST
Last Updated 30 ಜೂನ್ 2020, 15:14 IST
ಬೀದರ್‌ನಲ್ಲಿ ಮಂಗಳವಾರ ಜಿಲ್ಲಾಧಿಕಾರಿ ರಾಮಚಂದ್ರನ್‌ ಸಮ್ಮುಖದಲ್ಲಿ ಅಬಕಾರಿ ಉಪ ಆಯುಕ್ತ ಮಂಜುನಾಥ ಅವರು ಸನ್ನದುದಾರರಿಗೆ ನವೀಕರಿಸಿದ ಲೈಸನ್ಸ್‌ ನೀಡಿದರು
ಬೀದರ್‌ನಲ್ಲಿ ಮಂಗಳವಾರ ಜಿಲ್ಲಾಧಿಕಾರಿ ರಾಮಚಂದ್ರನ್‌ ಸಮ್ಮುಖದಲ್ಲಿ ಅಬಕಾರಿ ಉಪ ಆಯುಕ್ತ ಮಂಜುನಾಥ ಅವರು ಸನ್ನದುದಾರರಿಗೆ ನವೀಕರಿಸಿದ ಲೈಸನ್ಸ್‌ ನೀಡಿದರು   

ಬೀದರ್‌: 2020-2021ನೇ ಸಾಲಿಗೆ ಒಟ್ಟು 164 ಅಬಕಾರಿ ಸನ್ನದುಗಳನ್ನು ನವೀಕರಿಸಲಾಗಿದೆ. ನವೀಕೃತ ಲೈಸನ್ಸ್‌ ವಿತರಣೆ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌., ಸಮ್ಮುಖದಲ್ಲಿ ಅಬಕಾರಿ ಉಪ ಆಯುಕ್ತ ಮಂಜುನಾಥ ಅವರು ತಾಲ್ಲೂಕಿಗೆ ತಲಾ ಒಬ್ಬರಂತೆ ಐವರಿಗೆ ಸಾಂಕೇತಿಕವಾಗಿ ಲೈಸನ್ಸ್‌ಗಳನ್ನು ವಿತರಿಸಿದರು.

ನವೀಕರಿಸಲಾದ ಸನ್ನದು ಅವಧಿಯು 2020ನೇ ಜುಲೈ 1ರಿಂದ ಜೂನ್-2021 ರವರೆಗೆ ಜಾರಿಯಲ್ಲಿರಲಿದೆ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.