ಖಟಕಚಿಂಚೋಳಿ: ಸಮೀಪದ ನಾವದಗಿ ಗ್ರಾಮದಲ್ಲಿ ರೇವಪ್ಪಯ್ಯ ಮುತ್ಯಾರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
ಜಾತ್ರೆ ಅಂಗವಾಗಿ ದೇವಾಲಯದಲ್ಲಿ ರೇವಪ್ಪಯ್ಯ ಶರಣರಿಗೆ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ರೇವಪ್ಪಯ್ಯ ಶರಣರ ಮೂರ್ತಿ ಮೆರವಣಿಗೆ ಜರುಗಿತು.
ಶುಕ್ರವಾರ ಅಗ್ನಿ ಕುಂಡಕ್ಕೆ ಪೂಜೆ, ನೈವೇದ್ಯ ಸಮರ್ಪಣೆ ಮಾಡಿದ ನಂತರ ಶನಿವಾರ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ಶನಿವಾರ ನಡೆದ ರಥೋತ್ಸವಕ್ಕೆ ಹುಡಗಿ ಹಿರೇಮಠ ಸಂಸ್ಥಾನದ ವೀರುಪಾಕ್ಷ ಶಿವಾಚಾರ್ಯರು ಚಾಲನೆ ನೀಡಿದರು.
ಮೇಹಕರದ ಕಟ್ಟಿಮನಿ ಹಿರೇಮಠ ಸಂಸ್ಥಾನದ ರಾಜೇಶ್ವರ ಶಿವಾಚಾರ್ಯರು, ಬಬಲಾದದ ಗುರುಪಾದಲಿಂಗ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಕುಮಾರ ಸ್ವಾಮೀಜಿ, ಹಾವಗಿಲಿಂಗ ಶಿವಾಚಾರ್ಯರು ಹಾಗೂ ಮೃತ್ಯುಂಜಯ ಶಿವಾಚಾರ್ಯರು, ಸನ್ಮುಖ ಸ್ವಾಮೀಜಿ, ಚನ್ನಮಲ್ಲೇಶ್ವರ ಸ್ವಾಮೀಜಿ ಹಾಗೂ ಮಾರುತಿ ಲಿಂಗ ಮುತ್ಯಾ ಅವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.